ಕರ್ನಾಟಕ

karnataka

ETV Bharat / state

ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ: ಸಿಸಿಬಿಯಿಂದ 17ನೇ ಆರೋಪಿ ಅರೆಸ್ಟ್​ - ccb investigation updates

ಸ್ಯಾಂಡಲ್​​ವುಡ್​ಗೆ​​​ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ ಯನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಈತ ಪ್ರಕರಣದ 17 ನೇ ಆರೋಪಿಯಾಗಿದ್ದಾನೆ‌.

sandalwood drug case:  17th accused arrested by CCB police
ಸ್ಯಾಂಡಲ್​​ವುಡ್​​​ ಡ್ರಗ್ಸ್ ಜಾಲ: ಸಿಸಿಬಿ ಪೊಲೀಸರಿಂದ 17 ನೇ ಆರೋಪಿ ಬಂಧನ

By

Published : Sep 20, 2020, 12:12 PM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಡ್ರಗ್​​ ಪೆಡ್ಲರ್​ನನ್ನು ಬಂಧಿಸಿದ್ದಾರೆ.

ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ ಬಂಧಿತ ಆರೋಪಿ.‌ ಈತ ಪ್ರಕರಣದಲ್ಲಿ 17 ನೇ ಆರೋಪಿಯಾಗಿದ್ದಾನೆ‌. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರವಿಶಂಕರ್ ಸಿಸಿಬಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಶ್ರೀ ಹೆಸರು ಉಲ್ಲೇಖಿತವಾಗಿತ್ತು. ಪ್ರಕರಣದ 5 ನೇ‌ ಆರೋಪಿ ವೈಭವ್ ಜೈನ್ ಮತ್ತು ಶ್ರೀ ಪರಿಚಿತರಾಗಿದ್ದರು. ಇಬ್ಬರು ಹಲವಾರು ಡ್ರಗ್ಸ್ ಪಾರ್ಟಿ ನಡೆಸಿದ್ದಾರೆ ಎನ್ನಲಾಗ್ತಿದೆ.

ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ

ಶ್ರೀನಿವಾಸ ಸುಬ್ರಹ್ಮಣ್ಯನ್ ನಗರದ ಹೊರ ವಲಯದಲ್ಲಿ ವೀಕೆಂಡ್ ಹೋಮ್ ಹೆಸರಿನಲ್ಲಿ ಕೆಲ ಮನೆ ಮತ್ತು ಫ್ಲಾಟ್​​ಗಳನ್ನು ಹೊಂದಿದ್ದಾನೆ. ಈತ ಬಹುತೇಕ ಫ್ಲಾಟ್​ಗಳನ್ನು ಲೀಸ್ ಅಥವಾ ಬಾಡಿಗೆಗೆ ಪಡೆದಿದ್ದಾನೆ. ನಗರದ ಐಷರಾಮಿ ಹೋಟೆಲ್​​ನಲ್ಲಿ ಪಾರ್ಟಿ ಮಾಡಿದ ಬಳಿಕ ಆರೋಪಿಗಳಾದ ರಾಗಿಣಿ, ರವಿಶಂಕರ್, ಪ್ರಶಾಂತ್ ರಾಜು, ವೈಭವ್ ಜೈನ್ ಇತರರು ಸೇರಿಕೊಂಡು ವೀಕೆಂಡ್ ಹೋಮ್​ನಲ್ಲಿ ತೆರಳಿ ಎಂಡಿಎಂಎ ಸೇವನೆ ಮಾಡಿದ್ದಾರೆಂಬ ಮಾಹಿತಿಯಿದೆ. ಸದ್ಯ ಈ ಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ತಿಂಗಳಲ್ಲಿ ಹಲವು ಬಾರಿ ಶ್ರೀ ಫ್ಲಾಟ್​ಗೆ ರಾಗಿಣಿ ತೆರಳಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಫ್ಲಾಟ್​ನಲ್ಲಿ ಮಾದಕ ವಸ್ತುವಿನ 13 ಮಾತ್ರೆಗಳು, 100 ಗ್ರಾಂ ಗಾಂಜಾ 1.1 ಗ್ರಾಂ ಎಂಡಿಎ ಹಾಗೂ 0.5 ಗ್ರಾಂ ಹ್ಯಾಷ್ ಆಯಿಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details