ಬೆಂಗಳೂರು:ಸ್ಯಾಂಡಲ್ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಅವರಿಬ್ಬರ ನಡುವೆ ನಡೆದ ಜಗಳ ನಗರ ಪೊಲೀಸ್ ಆಯುಕ್ತರ ಕಚೇರಿ ತಲುಪಿದ್ದು, ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುತ್ತೋ, ಅಥವಾ ಎಫ್ಐಆರ್ ದಾಖಲಾಗುತ್ತೋ ಕಾದುನೋಡಬೇಕು.
ಪೊಲೀಸ್ ಆಯುಕ್ತರಿಗೆ ದೂರು ನೀಡುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ನಟಿ ಸಂಜನಾ ಅವರು, ಡಿಸೆಂಬರ್ 24 ರಂದು ಕೋಝಿ ಬಾರ್ ಗೆ ನಾನು ಕುಟುಂಬದ ಜೊತೆ ಹೋಗಿದ್ದೆ. ಅಲ್ಲಿ ನಡೆದ ಜಗಳದ ನಂತರ ಮದ್ಯ ರಾತ್ರಿ 2 ಗಂಟೆಗೆ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ನಿಂದ ಪದೇ ಪದೆ ಕರೆಮಾಡಿ ಸ್ಟೇಷನ್ಗೆ ಬನ್ನಿ ಅಂತ ಹೇಳಿದರು. ಆದರೆ, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಯಾವುದೇ ಮಹಿಳೆಯನ್ನ ಪೊಲೀಸ್ ಸ್ಟೇಷನ್ನಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಆದರೂ ಅವರು ನನ್ನನ್ನು ಹೇಗೆ ಕರೆದರು ಹಾಗೂ ತಮ್ಮ ಅಧಿಕಾರವನ್ನ ದೂರುಪಯೋಗ ಮಾಡಿಕೊಳ್ಳುತ್ತಿರುವ ವಿಷಯ ಕುರಿತು ನಾನು ಆಯುಕ್ತರಿಗೆ ಕೆಲವು ವಿಷಯಗಳನ್ನು ಹೇಳಬೇಕಿದೆ. ಹಾಗಾಗಿ ಕಮಿಷನರ್ ಕಚೇರಿಗೆ ಬಂದು ದೂರು ನೀಡುತ್ತಿದ್ದೇನೆಂದು ತಿಳಿಸಿದರು.