ಕರ್ನಾಟಕ

karnataka

ETV Bharat / state

ನಿಯಮ ಉಲ್ಲಂಘನೆ ಕಣ್ಣಿಗೆ ಕಂಡರೆ ಮಾತ್ರ ವಾಹನ ತಡೆಯಬೇಕು: ಸಂಚಾರ ಪೊಲೀಸರಿಗೆ ಕಮಲ್ ಪಂತ್ ಆದೇಶ - ಸಂಚಾರ ಸಂಪರ್ಕ ದಿನಸ

ಕಣ್ಣಿಗೆ ಕಾಣುವಂತಹ ಸಂಚಾರ ನಿಯಮ ಉಲ್ಲಂಘನೆ ಸಂದರ್ಭಗಳಲ್ಲಿ ಮಾತ್ರ ಕ್ರಮ ಜರುಗಿಸಬೇಕು ಎಂದು ಸಂಚಾರ ಪೋಲೀಸರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ.

Sanchara Samparka Divasa by Bengaluru police
ಕಮಲ್ ಪಂತ್

By

Published : Dec 12, 2020, 9:06 PM IST

ಬೆಂಗಳೂರು:ಸಂಚಾರ ಪೊಲೀಸರು ಯಾವುದೇ ವಾಹನಗಳ ದಾಖಲೆಗಳನ್ನು ದುರುದ್ದೇಶ ಇಟ್ಟುಕೊಂಡು ಪರಿಶೀಲನೆ ಮಾಡುವಂತಿಲ್ಲ. ಕಣ್ಣಿಗೆ ಕಾಣುವಂತ ಸಂಚಾರ ನಿಯಮ ಉಲ್ಲಂಘನೆ ಸಂದರ್ಭಗಳಲ್ಲಿ ಮಾತ್ರ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ‌ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ "ಸಂಚಾರ ಸಂಪರ್ಕ ದಿನಸ" ಕಾರ್ಯಕ್ರಮವಕ್ಕೆ ವೈಟ್ ಫೀಲ್ಡ್ ವಿಭಾಗದಲ್ಲಿ ಚಾಲನೆ ನೀಡಿ ಮಾತನಾಡಿದ ಕಮಲ್​ ಪಂತ್‌, ಅತಿ ವೇಗದ, ಅಜಾಗರೂಕತೆಯ ಚಾಲನೆ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡುವುದರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳಲಾಗುವುದು. ಸಾರ್ವಜನಿಕ ಸಂರಕ್ಷಣೆ ಕಾಯ್ದೆ ಪ್ರಕಾರ ಸಿಸಿಟಿವಿ ಬಳಸಿ ಪೊಲೀಸ್ ಠಾಣೆಯಲ್ಲೊಂದು ಸ್ಕ್ರೀನ್ ಮತ್ತು ನಿಮ್ಮ ಅಪಾರ್ಟ್​ಮೆಂಟ್​ನಲ್ಲಿ ಒಂದು ಸ್ಕ್ರೀನ್ ಇಟ್ಟು ಕ್ರಿಮಿನಲ್‌ ಚಟುವಟಿಕೆಗಳನ್ನು‌ ನಿಯಂತ್ರಿಸಬಹುದು ಎಂದರು.

ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

ಸಂಚಾರ ದಟ್ಟಣೆ, ರಸ್ತೆ ಬದಿಯಲ್ಲಿ ಡಸ್ಟ್, ಪಾಟ್ ಹೋಲ್ಸ್ , ವಾಟರ್ ಟ್ಯಾಂಕರ್​ಗಳನ್ನು ಅಪ್ರಾಪ್ತರು ಚಾಲನೆ ಮಾಡುವುದು, ವಾಹನಗಳನ್ನ ಅತಿ ವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡುವುದರ ಬಗ್ಗೆ ದೂರುಗಳು ಬಂದಿವೆ. ಜೊತೆಗೆ ಅಕ್ರಮ ಕಸಾಯಿಖಾನೆಗಳು, ಅನಧಿಕೃತ ಫ್ಲೆಕ್ಸ್​ಗಳು, ಅನಧಿಕೃತ ಕೇಬಲ್​ಗಳು, ಆ್ಯಂಬುಲೆನ್ಸ್ ಗಳಿಗೆ ಅಡ್ಡ ಬರುವುದು, ಟೋಯಿಂಗ್ ಮಾಡುವ ಸಿಬ್ಬಂದಿ ರೌಡಿಗಳಂತೆ ವರ್ತನೆ, ವರ್ತೂರು, ಗುಂಜೂರು, ವೈಟ್ ಫೀಲ್ಡ್ ಭಾಗದಲ್ಲಿ ಫುಟ್​ಪಾತ್ ಒತ್ತುವರಿ ಮುಂತಾದವುಗಳ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ. ಅಲ್ಲದೇ ಟೋಯಿಂಗ್ ಸಿಬ್ಬಂದಿ ಬಗ್ಗೆ ಯಾವುದೇ ದೂರಿಗಳಿದ್ದರೆ ಹೆಚ್ವಿನ ಶುಲ್ಕ ಪಡೆದರೆ ಅವರ ಬಗ್ಗೆ ಮಾಹಿತಿ ಕೊಡಿ ಅವರ ಗುತ್ತಿಗೆ ವಜಾಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

‌ಕೆಎಂಸಿ ಆ್ಯಕ್ಟ್ ಪ್ರಕಾರ ಫುಟ್​ಪಾತ್ ಒತ್ತುವರಿ, ಕಟ್ಟಡ ನಿರ್ಮಾಣದ ತ್ಯಾಜ್ಯ ಎಲ್ಲೆಂದರಲ್ಲಿ ಡಂಪ್ ಮಾಡುವುದು, ಅನಧಿಕೃತ ಸ್ಥಳಗಳಲ್ಲಿ ಕಟ್ಟ ನಿರ್ಮಾಣ ಮಾಡುವು ಕಂಡು ಬಂದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ‌ ಎಂದು ಡಿಸಿಪಿ ದೇವರಾಜ್ ತಿಳಿಸಿದರು. ಸಂಚಾರಿ ಪೊಲೀಸರೊಂದಿಗೆ ಹಲವು ಸಂಘ ಸಂಸ್ಥೆಗಳು ಕೆಲಸ ‌ಮಾಡುತ್ತಿವೆ, ಅದಕ್ಕಿಂತ‌ ಹೆಚ್ಚಾಗಿ ಸಾರ್ವಜನಿಕರು ಸಹಕಾರ ನೀಡಬೇಕು, ನಮ್ಮ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಕೆಲಸ‌ ಮಾಡಿದರೆ ಪೊಲೀಸರ ಸಮಸ್ಯೆಗಳು ನಿಮಗೆ ಅರ್ಥವಾಗಲಿದೆ ಎಂದಿದ್ದಾರೆ.

ABOUT THE AUTHOR

...view details