ಬೆಂಗಳೂರು: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹಾಡಹಗಲೇ ದರೋಡೆ ಮಾಡಿ, ಪರಾರಿಯಾಗಿದ್ದ ಆರೋಪಿಯನ್ನು ಕೇವಲ ಎರಡೇ ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದರೋಡೆ ಮಾಡುತ್ತಿರುವ ಆರೋಪಿಗಳು ದರೋಡೆ ಮಾಡಿ ನಾಪತ್ತೆಯಾಗಿದ್ದ ಗ್ಯಾಂಗ್ನ ಓರ್ವ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಇಮ್ರಾನ್ ಅಲಿಯಾಸ್ ಲಾರಿ ಮುಲಾಮ ಬಂಧಿತ ಆರೋಪಿಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕೋಗಿಲು ನಿವಾಸಿಯಾದ ಗೋಪಿಚಂದ್ ಎಂಬುವರು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಗ್ರಾಹಕರಿಂದ ಹಣ ಸಂಗ್ರಹಿಸಿಕೊಂಡು ಬೈಕ್ನಲ್ಲಿ ಬರುತ್ತಿದ್ದರು. ಇವರನ್ನು ಗುರಿಯಾಗಿಸಿಕೊಂಡು ಇಮ್ರಾನ್ ಹಾಗೂ ಸಹಚರರಾದ ನಿಜಾಂ, ಉಬೇದ್ ಎಂಬುವರು ಬೈಕ್ನಲ್ಲಿ ಗೋಪಿಚಂದ್ರನ್ನು ಹಿಂಬಾಲಿಸಿದ್ದಾರೆ.
ಇಮ್ರಾನ್ ಅಲಿಯಾಸ್ ಲಾರಿ ಮುಲಾಮ ಬಂಧಿತ ಆರೋಪಿ ಬಳಿಕ ಗೋಪಿಚಂದ್ ಬೈಕ್ ಅಡ್ಡಗಟ್ಟಿ ಚಾಕು ತೋರಿಸಿ ಅವರ ಬಳಿಯಿದ್ದ 13 ಸಾವಿರ ರೂ. ನಗದು ಹಾಗೂ ಬೈಕ್ ಸಮೇತ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೆ ಬಾಗಲೂರು ಠಾಣಾ ವ್ಯಾಪ್ತಿಯ ಬೆಳ್ಳಳ್ಳಿ ಕ್ರಾಸ್ ಬಳಿ ಆರೋಪಿಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಬಂಧಿಸಲು ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಾಗ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಇಮ್ರಾನ್ ಸಿಕ್ಕಿಬಿದ್ದಿದ್ದಾನೆ.
ಓದಿ:ಚಿನ್ನ ದೋಖಾ ಪ್ರಕರಣದಲ್ಲಿ ನಮ್ಮ ಮೇಲಿನ ಆರೋಪ ಸುಳ್ಳು; ಮಂಡ್ಯ ಬಿಜೆಪಿ ನಾಯಕಿ ಮೀನಾ
ಈ ವೇಳೆ ಚಾಕುವಿನಿಂದ ಹೆಡ್ ಕಾನ್ಸ್ಟೇಬಲ್ ಅಶೋಕ್ ಎಂಬುವರ ಕೈಗೆ ಹಲ್ಲೆ ಮಾಡಿದ್ದಾನೆ. ಆರೋಪಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದರೂ ಕ್ಯಾರೆ ಅಂದಿರಲಿಲ್ಲ. ಹೀಗಾಗಿ ಪ್ರಾಣರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡು ತಿಂದ ಇಮ್ರಾನ್ ವಿರುದ್ಧ ದಾಬಸ್ ಪೇಟೆ, ಎಚ್ಎಎಲ್, ರಾಜಾನುಕುಂಟೆ, ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ.