ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ಗೆ ಸಿಸಿಬಿ ಬುಲಾವ್ ನೀಡಿದೆ.
ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ಗೆ ಮತ್ತೆ ಸಿಸಿಬಿ ಬುಲಾವ್ - Former Mayor Sampath Raj interrogated by CCB
ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಕಳೆದ ಬಾರಿ ವಿಚಾರಣೆಗೆ ಹಾಜರಾಗಿದ್ದ ಸಂಪತ್ ರಾಜ್ ಸಿಸಿಬಿ ಪೊಲೀಸರ ಪ್ರಶ್ನೆಗೆ ತತ್ತರಿಸಿ ಹೋಗಿದ್ದರು. ಅಷ್ಟು ಮಾತ್ರವಲ್ಲದೇ ಸಂಪತ್ ರಾಜ್ ಅವರ ಐಫೋನ್ ಮೊಬೈಲ್ನ್ನು ಜಪ್ತಿ ಮಾಡಿ ಎಫ್ಎಸ್ಎಲ್ಗೆ ರವಾನಿನಿಸಲಾಗಿತ್ತು. ಸದ್ಯ ಮೊಬೈಲ್ ರಿಟ್ರೈವ್ ಹಾಗೂ ಬಂಧಿತರ ಹೇಳಿಕೆಯ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆಗೆ ಕರೆದಿದ್ದು, ವಿಚಾರಣೆ ವೇಳೆ ದ್ವಂದ್ವ ಹೇಳಿಕೆ ನೀಡಿದರೆ ಸಿಸಿಬಿ ಪೊಲೀಸರು ಬಂಧಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ.
ಸದ್ಯ ಮಾಜಿ ಮೇಯರ್ ಕೊರೊನಾ ಪಾಸಿಟಿವ್ ಕಾರಣ ನೀಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಬಹುತೇಕವಾಗಿ ಇಂದು ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಸದ್ಯ ಸಂಪತ್ ರಾಜ್ ಚಲನವಲನ ಗಮನಿಸುತ್ತಿದ್ದಾರೆ.