ಕರ್ನಾಟಕ

karnataka

ETV Bharat / state

ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಸಿಸಿಬಿಗೆ ತಲೆನೋವಾದ ಸಂಪತ್ ರಾಜ್ ಮೊಬೈಲ್ ರಿಟ್ರೀವ್

ಸದ್ಯ ಸಿಸಿಬಿ ತಂಡ ಕೇರಳದ ತ್ರಿವೇಂಡ್ರಂ, ಹೈದಾರಾಬಾದ್ ಸೇರಿದಂತೆ ಬೇರೆ ರಾಜ್ಯಗಳ ಎಫ್ಎಸ್ಎಲ್ ತಜ್ಞರ ಸಹಾಯ ಪಡೆಯುತ್ತಿದ್ದಾರೆ. ಸಂಪತ್​ ಅವರ ಪಿಎ ಅರುಣ್ ಹೇಳಿಕೆಯ ಆಧಾರದ ಮೇರೆಗೆ ಟೆಕ್ನಿಕಲ್ ಪಾಯಿಂಟ್​ಗಳಿಂದ ಸಂಪತ್ ರಾಜ್ ಅವರನ್ನ ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದೆ.

ಡಿ.ಜೆ ಹಳ್ಳಿ ಗಲಭೆ ಪ್ರಕರಣ  Sampath Raj Mobile Retrieve problem
ಸಂಪತ್ ರಾಜ್

By

Published : Aug 24, 2020, 10:12 AM IST

Updated : Aug 24, 2020, 11:13 AM IST

ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸದ್ಯ ಪೊಲೀಸರಿಗೆ ಮೊಬೈಲ್ ಫೋನ್ ರಿಟ್ರೀವ್ ಮಾಡುವುದೇ ಒಂದು ಸಮಸ್ಯೆಯಾಗಿದೆ. ಆದರೆ, ಸಮೀಯುದ್ದೀನ್, ವಾಜೀದ್ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್, ಮಾಜಿ ಮೇಯರ್ ಸಂಪತ್​ ರಾಜ್​ ಅವರ ಪಿಎ ಅರುಣ್ ಬಳಸುತ್ತಿದ್ದ ಮೊಬೈಲ್ ಫೋನ್​ಗಳು ದುಬಾರಿ ಬೆಲೆ ಹೈಫೈ ಫೋನ್​ಗಳಾದ ಕಾರಣ ರಿಟ್ರೀವ್ ಮಾಡುವುದಕ್ಕೆ ಹರಸಾಹಸ ಪಡುವಂತಾಗಿದೆ.

ಸದ್ಯ ಮಡಿವಾಳದ ಎಫ್​ಎಸ್​ಎಲ್ ತಂಡ 2016ಕ್ಕಿಂತ ಮುಂಚಿನ ಮೊಬೈಲ್ ರಿಟ್ರೇವ್ ಮಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಹೊಸ ಫೀಚರ್​ಗಳನ್ನು ಹೊಂದಿರುವ ಈ ಮೊಬೈಲ್​ಗಳನ್ನು ರಿಟ್ರೀವ್ ಮಾಡುವುದಕ್ಕೆ ಸಿಸಿಬಿ ಹೆಣಗಾಡುತ್ತಿದೆ.

ಸಿಸಿಬಿ ತಂಡ ಕೇರಳದ ತ್ರಿವೇಂಡ್ರಂ, ಹೈದಾರಾಬಾದ್ ಸೇರಿದಂತೆ ಬೇರೆ ರಾಜ್ಯಗಳ ಎಫ್ಎಸ್ಎಲ್ ತಜ್ಞರ ಸಹಾಯ ಪಡೆಯುತ್ತಿದ್ದಾರೆ. ಸಂಪತ್​ ಅವರ ಪಿಎ ಅರುಣ್ ಹೇಳಿಕೆಯ ಆಧಾರದ ಮೇರೆಗೆ ಟೆಕ್ನಿಕಲ್ ಪಾಯಿಂಟ್​ಗಳಿಂದ ಸಂಪತ್ ರಾಜ್ ಅವರನ್ನ ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದೆ.

ಆದರೆ, ಸಂಪತ್​ ರಾಜ್​ ಹೊಂದಿದ್ದ ಫೋನ್​ ಸಾಕಷ್ಟು ಸೆಕ್ಯುರಿಟಿ ಫೀಚರ್ಸ್ ಹೊಂದಿದೆ. ಅಲ್ಲದೇ ಅವರು ತಮ್ಮ ಮೊಬೈಲ್​ನಲ್ಲಿನ ಸಂದೇಶಗಳು, ಕಾಲ್ ಹಿಸ್ಟರಿ ಅನ್ನ ಸಂಪತ್ತ್ ರಾಜ್ ಡಿಲಿಟ್ ಮಾಡಿದ್ದಾರೆ. ಇದರಿಂದ ರಿಟ್ರೀವ್ ಮಾಡುವುದು ಕಷ್ಟ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ‌ ಲಭ್ಯವಾಗಿದೆ.

Last Updated : Aug 24, 2020, 11:13 AM IST

ABOUT THE AUTHOR

...view details