ಕರ್ನಾಟಕ

karnataka

ETV Bharat / state

ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್​ ಸಂಪತ್​ ರಾಜ್ ಜೈಲಿಂದ​ ಬಿಡುಗಡೆ - ಡಿಜೆ ಹಳ್ಳಿ ಗಲಭೆ ಸುದ್ದಿ

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಮಾಜಿ ಮೇಯರ್​ ಸಂಪತ್​ ರಾಜ್​ ಬಿಡುಗಡೆಯಾಗಿದ್ದಾರೆ.

sampat-raj
ಮಾಜಿ ಮೇಯರ್​ ಸಂಪತ್​ ರಾಜ್

By

Published : Feb 12, 2021, 9:36 PM IST

Updated : Feb 12, 2021, 10:35 PM IST

ಬೆಂಗಳೂರು: ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಮೇಯರ್​ ಸಂಪತ್ ರಾಜ್ ಇದೀಗ ಬಿಡುಗಡೆಗೊಂಡಿದ್ದಾರೆ.

ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿದ ಬಳಿಕ, ಬಿಡುಗಡೆ ಪ್ರಕ್ರಿಯೆಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ. ಈ ಬಳಿಕ ಸಂಪತ್​ ರಾಜ್​ನನ್ನು ಕರೆತರಲು ಬೆಂಜ್​ ಕಾರೊಂದನ್ನು ಜೈಲು ಆವರಣದೊಳಗೆ ಸಿಬ್ಬಂದಿ ಬಿಟ್ಟಿದ್ದರು.

ಮಾಜಿ ಮೇಯರ್​ ಸಂಪತ್​ ರಾಜ್

ಇನ್ನು ಈ ಸಂಬಂಧ ಮಾತನಾಡಿದ ಸಂಪತ್​, "ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಆ ನಂಬಿಕೆಯಿಂದಲೇ ನಾನು‌ ಇವತ್ತು ಬಿಡುಗಡೆಯಾಗಿದ್ದೇನೆ. ಮುಂದೆ ನಾನು ಈ ಆರೋಪಗಳಿಂದ‌ ಮುಕ್ತವಾಗುವ ವಿಶ್ವಾಸ ಇದೆ. ರಾಜಕೀಯ‌ ಷಡ್ಯಂತ್ರದ ಬಗ್ಗೆ ನಾನೇನು ಮಾತನಾಡುವುದಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ನಮ್ಮ ರಾಜಕೀಯ ನಾಯಕರನ್ನು ಭೇಟಿಯಾಗುವ ಬಗ್ಗೆ ಮುಂದೆ ತಿಳಿಸುತ್ತೇನೆ." ಎಂದರು.

Last Updated : Feb 12, 2021, 10:35 PM IST

ABOUT THE AUTHOR

...view details