ಕರ್ನಾಟಕ

karnataka

ETV Bharat / state

ಜೈಲಿನಲ್ಲಿ ರುದ್ರೇಶ್ ಕೊಲೆ ಆರೋಪಿಗಳ ಭೇಟಿ: ಸಮಿಯುದ್ದೀನ್ ಸಿಸಿಟಿವಿ ದೃಶ್ಯ ಎಫ್ಎಸ್ಎಲ್​ಗೆ ರವಾನೆ..! - Rudresh murder case

ಜೈಲಿನ ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಗೂ, ಸಮಿಯುದ್ದೀನ್​ಗೂ ತಾಳೆಯಾಗಿದೆ‌. ಸಿಸಿಟಿವಿ ದೃಶ್ಯ ಹಾಗೂ ಫೋಟೋವನ್ನ ಎಫ್​ಎಸ್​ಎಲ್​​ ಟೆಕ್ನಿಕಲ್ ಟೀಂಗೆ ರವಾನೆ ಮಾಡಲಾಗಿದೆ.

Sameeyuddin
ಸಮೀಯುದ್ದೀನ್

By

Published : Aug 19, 2020, 12:52 PM IST

ಬೆಂಗಳೂರು: ಉಗ್ರರ ನಂಟಿನ ಶಂಕೆ ಮೇರೆಗೆ ಸಮಿಯುದ್ದೀನ್​ನನ್ನು ಸಿಸಿಬಿ ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈತ 2016 ರ ರುದ್ರೇಶ್ ಮರ್ಡರ್ ಪ್ರಕರಣ, ಹಾಗೆ ಇತರ ಪ್ರಕರಣ ಸಂಬಂಧ ಜೈಲು‌ ಸೇರಿದಾಗ ಜೈಲಿನ ಇತರ ಆರೋಪಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದಾನೆ. ಹಾಗೆ ಪರಪ್ಪನ ಅಗ್ರಹಾರದಲ್ಲಿ ರುದ್ರೇಶ್ ಕೊಲೆ ಮಾಡಿದ ಆರೋಪಿಗಳನ್ನ ಪದೇ ಪದೆ ಭೇಟಿಯಾಗುತ್ತಿರುವುದರ ಬಗ್ಗೆ ಜೈಲಿನ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಅಲ್ಲದೇ ಜೈಲಿನ ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಗೂ, ಸಮಿಯುದ್ದೀನ್​ಗೂ ತಾಳೆಯಾಗಿದೆ‌. ಸಿಸಿಟಿವಿ ದೃಶ್ಯ ಹಾಗೂ ಫೋಟೋವನ್ನ ಎಫ್​ಎಸ್​ಎಲ್​​ ಟೆಕ್ನಿಕಲ್ ಟೀಂಗೆ ರವಾನೆ ಮಾಡಲಾಗಿದೆ. ಜೈಲಿನಲ್ಲಿ ಆಗಾಗ್ಗೆ ಭೇಟಿಯಾಗುವ ಕಾರಣ ಏನು, ಘಟನೆಯಲ್ಲಿ ಈತ ಕೂಡ ಇದ್ದಾನೆಯೇ, ಈತನ ಪಾತ್ರ ಏನು ಅನ್ನೋದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.

ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಕೆಲ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇವರನ್ನ ಈಗಾಗಲೇ ಎನ್​ಐಎ ತನಿಖೆ ನಡೆಸುತ್ತಿದೆ. ಅಲ್ಲದೇ ಮುಂಬೈ ನಂಟಿನ ಬಗ್ಗೆಯೂ ಸಿಸಿಬಿಗೆ ಕೆಲ ಮಾಹಿತಿ ಸಿಕ್ಕಿದ್ದು, ಈ ಸಂಬಂಧ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ‌. ಸದ್ಯ ಸಮಿಯುದ್ದೀನ್​ ಬಹುತೇಕವಾಗಿ ಉಗ್ರರ ಜೊತೆ ನಂಟು ಹೊಂದಿರುವ ಕಾರಣ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ.

ABOUT THE AUTHOR

...view details