ಬೆಂಗಳೂರು: ದೆಹಲಿಯಲ್ಲಿ ರಾಷ್ಟ್ರಪತಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ, ಸಾಲುಮರದ ತಿಮ್ಮಕ್ಕ ಅವರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸದಾಶಿವನಗರ ಬಿಡಿಎ ನಿವಾಸದಲ್ಲಿ ಅಭಿನಂದಿಸಿದರು.
ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಮಾದರಿ: ಪರಮೇಶ್ವರ್ - KN_BNG_02_18_DCM_thimmakka_script_sowmya_7202707
ರಾಷ್ಟ್ರಪತಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸಾಲುಮರದ ತಿಮ್ಮಕ್ಕ ಅವರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿನಂದಿಸಿದರು.
ಸಾಲುಮರದ ತಿಮ್ಮಕ್ಕ ಅವರನ್ನು ಅಭಿನಂದಿಸಿದ ಡಾ. ಜಿ. ಪರಮೇಶ್ವರ್
ಬಳಿಕ ಮಾತನಾಡಿದ ಅವರು, ಮಾಗಡಿಯ ಸಣ್ಣ ತಾಲೂಕಿನಿಂದ ಬಂದ ಇವರು ತಮಗೆ ಮಕ್ಕಳಾಗಲಿಲ್ಲ ಎಂಬ ಬೇಸರಿಂದ ವೃಕ್ಷಗಳನ್ನು ಬೆಳೆಸುವ ಮೂಲಕ ನಿರಾಸೆ ಸರಿದೂಗಿಸುವ ಕೆಲಸ ಮಾಡಿದ್ದಾರೆ.4ಕಿ.ಮೀ. ಮರಗಳನ್ನು ಬೆಳೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ.
ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಇವರ ಕೆಲಸ ನಮ್ಮೆಲ್ಲರಿಗೂ ಮಾದರಿ. ಇದನ್ನು ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.