ಹಾಸನ: ವಾಸಕ್ಕೊಂದು ಮನೆಯ ಜೊತೆಗೆ ಬದಕಲು ಒಂದಿಷ್ಟು ಜಮೀನು ಮಂಜೂರು ಮಾಡಿಕೊಡಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರಾಗಿರುವ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಸಾಲು ಮರದ ತಿಮ್ಮಕ್ಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಇದೇ ವೇಳೆ ಜೀವನ ನಿರ್ವಹಣೆಗಾಗಿ ಒಂದಿಷ್ಟು ಕೃಷಿ ಜಮೀನು ಮತ್ತು ವಾಸಕ್ಕೆ ಯೋಗ್ಯವಾದ ಮನೆ ಮಂಜೂರಾತಿ ಮಾಡಿ ಕೊಡುವಂತೆ ಹೇಳಿದರು.