ಕರ್ನಾಟಕ

karnataka

ETV Bharat / state

ಪಿಪಿಇ ಕಿಟ್, ಮಾಸ್ಕ್ ಧರಿಸಿ ಸಲೂನ್​​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ - ಬೆಂಗಳೂರು ಲೇಟೆಸ್ಟ್​ ನ್ಯೂಸ್​

ಸರ್ಕಾರದ ಷರತ್ತಿನ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಸಲೂನ್ ಶಾಪ್ ಸಿಬ್ಬಂದಿ, ಪಿಪಿಟಿ ಕಿಟ್ ಹಾಗೂ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಶಾಪ್​​​ನಲ್ಲಿ ಸ್ಯಾನಿಟೈಸರ್​ ವ್ಯವಸ್ಥೆ ಮಾಡಿದ್ದು, ಅಂಗಡಿಗೆ ಬರುವಂತಹ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕೆಂದು ಶಾಪ್​ಮುಂದೆ ಬೋರ್ಡ್​ ಕೂಡ ಹಾಕಲಾಗಿದೆ.

Saloon shop staff are using ppt kit and mask at Bangalore
ಪಿಪಿಟಿ ಕಿಟ್,ಮಾಸ್ಕ್ ಧರಿಸಿ ಸಲೂನ್​​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ

By

Published : May 20, 2020, 3:56 PM IST

Updated : May 20, 2020, 4:37 PM IST

ಬೆಂಗಳೂರು:ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಲೂನ್​ ಶಾಪ್​ಗಳು ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ನಗರದಲ್ಲಿ ಶಾಪ್​ಗಳು ತೆರೆದಿದ್ದು, ಕೆಲಸ ಆರಂಭಿಸಿವೆ.

ಪಿಪಿಇ ಕಿಟ್, ಮಾಸ್ಕ್ ಧರಿಸಿ ಸಲೂನ್​​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ

ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದ್ದು, ಎಲ್ಲಾ ಶಾಪ್​ಗಳು ತೆರೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಇಂದು ನಗರದಲ್ಲಿ ಸಲೂನ್ ಶಾಪ್​​​​ಗಳು ಆರಂಭವಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣೆ ಸಮೀಪದಲ್ಲಿರುವ ಇಪ್ರೆಸಿವ್ ಫ್ಯಾಮಿಲಿ ಸಲೂನ್ ಅಂಡ್ ಶಾಪ್​ನಲ್ಲಿನ ಸಿಬ್ಬಂದಿ ತಮ್ಮ ಮತ್ತು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸರ್ಕಾರದ ಷರತ್ತಿನ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಸಲೂನ್ ಶಾಪ್ ಸಿಬ್ಬಂದಿ, ಪಿಪಿಇ ಕಿಟ್ ಹಾಗೂ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಶಾಪ್​​ನಲ್ಲಿ ಸ್ಯಾನಿಟೈಸರ್​ ವ್ಯವಸ್ಥೆ ಮಾಡಿದ್ದು, ಅಂಗಡಿಗೆ ಬರುವಂತಹ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕೆಂದು ಶಾಪ್​ನ ಮುಂದೆ ಬೋರ್ಡ್​ ಕೂಡ ಹಾಕಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪಿಪಿಇ‌ ಧರಿಸಿ ಕರ್ತವ್ಯ ಮಾಡುತ್ತಿರುವುದು ನೋಡಿದ್ದೆ. ಗ್ರಾಹಕರ ಹಿತದೃಷ್ಟಿ ಹಾಗೂ ನಮ್ಮ ಆರೋಗ್ಯದ ದೃಷ್ಟಿಯಿಂದ ಪಿಪಿಇ ಕಿಟ್ ಬಳಸುವುದು ಉತ್ತಮ ಎಂದುಕೊಂಡು ಈ‌‌ ಕಿಟ್ ಬಳಸಿದ್ದೇವೆ ಎಂದು ಶಾಪ್ ಮಾಲೀಕ ರವಿ ಈಟಿವಿ ಭಾರತ್​ಗೆ ತಿಳಿಸಿದರು.

Last Updated : May 20, 2020, 4:37 PM IST

ABOUT THE AUTHOR

...view details