ಕರ್ನಾಟಕ

karnataka

ETV Bharat / state

ಬೆಂಗಳೂರಿನ ಶಿವನಗರದಲ್ಲಿ ಕೊರೊನಾಗೆ ಹೇರ್ ಸಲೂನ್​ ಮಾಲೀಕ ಬಲಿ - ಬೆಂಗಳೂರಿನಲ್ಲಿ ಸಲೂನ್​ ಶಾಪ್​ ಮಾಲೀಕ ಸಾವು,

ಕೊರೊನಾಗೆ ಹೇರ್ ಸಲೂನ್​​ ಮಾಲೀಕ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Saloon shop owner died, Saloon shop owner died by covid, Bangalore Saloon shop owner died by covid, Bangalore Saloon shop owner died by covid news, ಸಲೂನ್​ ಶಾಪ್​ ಮಾಲೀಕ ಸಾವು, ಬೆಂಗಳೂರಿನಲ್ಲಿ ಸಲೂನ್​ ಶಾಪ್​ ಮಾಲೀಕ ಸಾವು, ಬೆಂಗಳೂರಿನಲ್ಲಿ ಸಲೂನ್​ ಶಾಪ್​ ಮಾಲೀಕ ಸಾವು ಸುದ್ದಿ,
ಶಿವನಗರದಲ್ಲಿ ಕೊರೊನಾಗೆ ಹೇರ್ ಕಟ್ಟಿಂಗ್ ಶಾಪ್ ಮಾಲೀಕ ಬಲಿ

By

Published : Jul 1, 2020, 1:31 PM IST

ಬೆಂಗಳೂರು: ಉದ್ಯಾನನಗರಿಯಲ್ಲಿ ಮಹಾಮಾರಿ ಕೊರೊನಾ ಮತ್ತೊಂದು ಬಲಿ ಪಡೆದಿದೆ. ಇದೀಗ ಹೇರ್ ಸಲೂನ್​ ಮಾಲೀಕ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ‌

ಶಿವನಗರ ವಾರ್ಡ್‌ನ 45 ವರ್ಷದ ಸೋಂಕಿತ ಜ್ವರದಿಂದ ಬಳಲುತ್ತಿದ್ದರು. ಕಳೆದ 1 ವಾರದ ಹಿಂದೆ ಕೆ ಸಿ‌ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಹಲವರಿಗೆ ಹೇರ್ ಕಟ್ಟಿಂಗ್ ಮಾಡಿದ್ದು, ಇದೀಗ ಶಾಪ್​ಗೆ ಹೋಗಿದ್ದವರಲ್ಲಿ ಆತಂಕ ಹೆಚ್ಚಿದೆ.

ಶಿವನಗರದಲ್ಲಿ ಕೊರೊನಾಗೆ ಹೇರ್ ಕಟ್ಟಿಂಗ್ ಶಾಪ್ ಮಾಲೀಕ ಬಲಿ

ಶಿವಾಜಿನಗರದ ಎಇಇಗೆ ತಗುಲಿದ ಸೋಂಕು...

ಬಿಬಿಎಂಪಿ ಸಿಬ್ಬಂದಿಗೆ ಬೆನ್ನು ಹತ್ತಿರುವ ಕೊರೊನಾ ಮಹಾಮಾರಿ ಈಗ ಎಇಇಗೂ ತಗುಲಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಿಬ್ಬಂದಿಗೆ ಕೊರೊನಾ ‌ಸೋಂಕು ದೃಢಪಟ್ಟಿದೆ. ಶಿವಾಜಿ ನಗರದ ಘನತ್ಯಾಜ್ಯ ನಿರ್ವಹಣೆ ಎಇಇಗೆ, ವಿಶೇಷ ಆಯುಕ್ತ ರಂದೀಪ್ ಪಿಎಗೆ ಸೋಂಕು ತಗುಲಿದ್ದು, ಬಿಬಿಎಂಪಿ ಅಧಿಕಾರಿಗಳಿಗೂ ನಡುಕ ಶುರುವಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಗೂ ಕಾಲಿಟ್ಟ ಕೊರೊನಾ!

ಬಿಬಿಎಎಂಪಿಯಲ್ಲಿನ ಐಎಎಸ್ ಅಧಿಕಾರಿಯ ಸಹಾಯಕನಿಗೆ ಸೋಂಕು ತಗುಲಿದ ಪರಿಣಾಮ ಆ ಅಧಿಕಾರಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ABOUT THE AUTHOR

...view details