ಬೆಂಗಳೂರು: ಲಾಕ್ಡೌನ್ ನಂತರ ಸರ್ಕಾರ ಒಂದಷ್ಟು ಷರತ್ತುಗಳನ್ನು ವಿಧಿಸಿ ಎರಡು ತಿಂಗಳ ನಂತರ ಸಲೂನ್ ಶಾಪ್ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆ ನಗರದ ಬಹುತೇಕ ಸಲೂನ್ ಶಾಪ್ಗಳಲ್ಲಿ ಸರ್ಕಾರದ ಆದೇಶದಂತೆ ಗ್ರಾಹಕರಿಗೆ ಹಾಗೂ ಶಾಪ್ನವರಿಗೆ ಕೊರೊನಾ ಹರಡಂತೆ ಸಲೂನ್ಗಳ ಮಾಲೀಕರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಸಲೂನ್ಗೆ ಬರುವ ಪ್ರತಿಯೊಬ್ಬ ಗ್ರಾಹಕನಿಗೂ ಮಾಸ್ಕ್ ಕಡ್ಡಾಯ. ಅಲ್ಲದೇ ಅಂಗಡಿ ಒಳಗೆ ಬರುವ ಮುಂಚೆ ಟೆಂಪ್ರೇಚರ್ ಚೆಕ್ ಮಾಡಿ ಒಳಗೆ ಬಿಡುತ್ತಾರೆ. ಕಟಿಂಗ್ ಮಾಡುವ ಮುಂಚೆ ಚೇರ್ಗಳಿಗೆ ಸ್ಯಾನಿಟೈಸ್ ಮಾಡುಲಾಗುತ್ತದೆ. ಇನ್ನು ಕಂಟಿಗ್ ಮಾಡಿಸಲು ಬರುವ ಪ್ರತಿಯೊಬ್ಬರ ಮಾಹಿತಿ ಹಾಗೂ ಪೋನ್ ನಂಬರ್ ಸಂಗ್ರಹಿಸುತ್ತಿದ್ದಾರೆ.
ಒಂದು ಕುರ್ಚಿಗೂ ಮತ್ತೊಂದು ಕುರ್ಚಿಗೂ ಮೂರರಿಂದ ನಾಲ್ಕು ಅಡಿ ಅಂತರ ಕಾಪಾಡಿಕೊಂಡು ಕಟಿಂಗ್ ಮಾಡಲಾಗುತ್ತಿದೆ.ಪಿಪಿಇ ಕಿಟ್ ಧರಿಸುವ ಮೂಲಕ ಗ್ರಾಹಕರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ಈ ಆದೇಶಗಳಿಂದ ಸಲೂನ್ ಶಾಪ್ ಮಾಲೀಕರಿಗೆ ಅರ್ಥಿಕವಾಗಿ ಹೊರೆಯಾಗಿದೆಯಂತೆ.
ಸರ್ಕಾರದ ಆದೇಶ ಪಾಲಿಸಿ ಸೇವೆ ನೀಡುತ್ತಿರುವ ಸಲೂನ್ಗಳು ಕೊಣನಕುಂಟೆಯ ಸಲೂನ್ ಶಾಪ್ ಒಂದರ ಮಾಲೀಕ ರವಿ ಮಾತನಾಡಿ, ಪ್ರತಿಯೊಬ್ಬ ಗ್ರಾಹಕರಿಗೂ ಯೂಸ್ ಅಂಡ್ ಥ್ರೋ ಟವೆಲ್ ಬಳಸುವುದು. ಸ್ಯಾನಿಟೈಸರ್ ಹಾಗೂ ನಾವು ಪಿಪಿಇ ಕಿಟ್, ಫೇಸ್ ಶೀಲ್ಡ್ , ಮಾಸ್ಕ್ ಹಾಗೂ ಗ್ಲೌಸ್ ಧರಿಸಬೇಕಿರುವುದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಯಾಗಿದೆ. ಅಲ್ಲದೆ ಗ್ರಾಹಕರ ಹಿತದೃಷ್ಟಿಯಿಂದ ಹೆಚ್ಚು ಶುಲ್ಕ ಪಡೆಯುವಂತಿಲ್ಲ. ನಮ್ಮ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಶುಲ್ಕ ಪಡೆಯಬೇಕಿದೆ. ಇದರ ಜೊತೆಗೆ ಲಾಕ್ಡೌನ್ ಮುಂಚೆ ಇದ್ದ ಬ್ಯುಸಿನೆಸ್ ಈಗ ಇಲ್ಲ. ಗ್ರಾಹಕರು ಸಲೂನ್ಗಳಿಗೆ ಬರುವುದಕ್ಕೆ ಭಯ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ನೆರವು ನಮಗೆ ಸಿಗಬಹುದು ಎಂಬ ಭರವಸೆಯಲ್ಲಿ ನಾವು ಇದ್ದೇವೆ ಎಂದರು.