ಬೆಂಗಳೂರು: ಲಾಕ್ಡೌನ್ ಸಡಿಲಿಕೆ ನಂತರ ಸೌಂದರ್ಯ ಪ್ರಜ್ಞೆ ಇರೋ ಮಹಿಳೆಯರು ಹೇರ್ ಕಟ್, ಫೇಶಿಯಲ್, ವ್ಯಾಕ್ಸಿಂಗ್ ಮಾಡಿಸಿಕೊಳ್ಳಲು ಸಲೂನ್ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಗರದ ಬ್ರಾಂಡೆಡ್ ಸಲೂನ್ಗಳಾದ ವೈಎಲ್ಜಿ, ಪೆರಿಮಿಟರ್, ಲಾಕ್ಮಿ, ಗ್ರೀನ್ ಟ್ರೆಂಡ್, ಸ್ಪಿನ್ಗಳು ಈಗ ತೆರೆದಿವೆ. ಆದ್ರೆ ಕಸ್ಟಮರ್ ಕಾಲ್ ಮಾಡಿದ್ರೆ ಮೊದಲು ಕೇಳೋದು ಯಾವ ಸೇಫ್ಟಿ ಕ್ರಮಗಳನ್ನ ತಗೊಂಡಿದ್ದೀರಿ ಅನ್ನೋದು. ಸಲೂನ್ನವರಿಗೆ ಈ ಕುರಿತ ಮೆಸೇಜ್ ಕಳುಹಿಸಿ ಕಸ್ಟಮರ್ ಓಕೆ ಅಂದ್ರೆ ಮಾತ್ರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುತ್ತಾರೆ. ಇನ್ನು ಥ್ರೆಡ್ಡಿಂಗ್ ಮೂಲಕ ಮಾಡುವ ಐಬ್ರೋ, ಅಪ್ಪರ್ ಲಿಪ್, ಚಿನ್ ಥ್ರೆಡ್ಡಿಂಗ್ನ ಎಲ್ಲಾ ಕಡೆ ಮಾಡದೆ ಈಗ ವ್ಯಾಕ್ಸಿಂಗ್ ಮಾತ್ರ ಚಾಲ್ತಿಯಲ್ಲಿದೆ.
ಬ್ಯೂಟಿ ಜೊತೆಗೆ ಸೇಫ್ಟಿ ಕೇಳ್ತಿರೋ ಲೇಡೀಸ್... ಪ್ರತ್ಯೇಕ ಸೇವೆಗಳನ್ನ ಕಡಿಮೆ ಮಾಡಿ, ಪ್ಯಾಕೇಜ್ನಲ್ಲಿ ಕೊಡುವ ಸೇವೆಯನ್ನು ಮಾತ್ರ ಸದ್ಯಕ್ಕೆ ಕೊಡಲಾಗುತ್ತಿದೆ. ಜೊತೆಗೆ ಪ್ರತಿಯೊಂದರ ಬೆಲೆಯೂ ಕೊಂಚ ಹೆಚ್ಚಾಗಿದೆ. ಪ್ರತಿ ಗ್ರಾಹಕರಿಗೂ ಪ್ರತ್ಯೇಕ ಸುರಕ್ಷತೆಯ ಕ್ರಮ ಕೈಗೊಳ್ಳುತ್ತ ಇರುವುದರಿಂದ ರೇಟ್ ಸಹ ಹೆಚ್ಚಾಗಿದೆ. ನಗರದ ವೈಎಲ್ಜಿ ಸಲೂನ್ ಬ್ರಾಂಚ್ಗಳಲ್ಲಿ ಸಿಬ್ಬಂದಿ ಪಿಪಿಇ ಕಿಟ್ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ರಾಹಕರು ಸಲೂನ್ ಎಂಟ್ರಿಯಾಗುವ ಮೊದಲೇ ದೇಹದ ಉಷ್ಣತೆ, ಆಕ್ಸಿಜನ್ ಲೆವೆಲ್ ಚೆಕಪ್ ಮತ್ತು ಅವರಿಗೆ ಪ್ರಯಾಣದ ಹಿಸ್ಟರಿ ಇದೆಯೋ ಇಲ್ಲವೋ ಅನ್ನೋದನ್ನೂ ತಿಳಿದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ವೈಎಲ್ಜಿ ಸಲೂನ್ನ ಸಹ ಸಂಸ್ಥಾಪಕಿ ವೈ. ಜಯಂತಿ ಬಾಲಚಂದ್ರ ಮಾತನಾಡಿ, ಪ್ರತಿ ಗ್ರಾಹಕರ ಸೇವೆಗೂ ಪ್ರತ್ಯೇಕ ಪಿಪಿಇ ಕಿಟ್ ಬಳಸಲಾಗುತ್ತಿದೆ. ವಾರದಲ್ಲಿ ಒಂದು ದಿನ ರಜೆ ಇದ್ದು, ಆ ದಿನ ಸಂಪೂರ್ಣವಾಗಿ ಸಲೂನ್ ಕ್ಲೀನ್ ಮಾಡಲಾಗುತ್ತಿದೆ. ಇನ್ನು ಹುಡುಗಿಯರ ಫೇವರೆಟ್ ಸಲೂನ್ ಪೆರಿಮೀಟರ್ ಕೂಡಾ ಸಾಮಾಜಿಕ ಅಂತರಕ್ಕಾಗಿ ಪ್ರತ್ಯೇಕ ಕ್ಯಾಬಿನ್ ಮಾಡಿಕೊಂಡಿದೆ.
ಇನ್ನು ಹುಡುಗಿಯರ ಫೇವರೆಟ್ ಸಲೂನ್ ಪೆರಿಮೀಟರ್ ಕೂಡಾ ಸಾಮಾಜಿಕ ಅಂತರಕ್ಕಾಗಿ ಪ್ರತ್ಯೇಕ ಕ್ಯಾಬಿನ್ಗಳನ್ನು ಮಾಡಿಕೊಂಡಿದೆ.. ಬ್ಯುಟೀಶಿಯನ್ನವರೂ ಶೂ ಕವರ್, ಏಪ್ರಾನ್, ಫೇಸ್ ಮಾಸ್ಕ್, ಗ್ಲೌಸ್ ಬಳಸ್ತಿದ್ದಾರೆ ಅಂತ ಸೀನಿಯರ್ ಹೇರ್ ಸ್ಟೈಲಿಸ್ಟ್ ರಕ್ಷಾ ಹೇಳ್ತಾರೆ.