ಕರ್ನಾಟಕ

karnataka

ETV Bharat / state

ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಐಟಿ ಉದ್ಯೋಗಿಗಳಿಗೆ ಬೆಂಗಳೂರಿನ ಸಲೂನ್​​ ಮಾಲೀಕನಿಂದ ಆಶ್ರಯ! - ಕೆಲಸ ಕಳೆದುಕಕೊಂಡು ಬೀದಿಗೆ ಬಿದ್ದ ಐಟಿ ಉದ್ಯೋಗಿಗಳು

ಲಾಕ್​ಡೌನ್​ ಘೋಷಣೆಯಾದ ನಂತರ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಈಶಾನ್ಯ ರಾಜ್ಯದ ಅನೇಕ ಜನರಿಗೆ ಸಲೂನ್ ಮಾಲೀಕರೊಬ್ಬರು ಆಶ್ರಯ ನೀಡಿದ್ದಾರೆ.

Salon owner in Bengaluru provides shelter to jobless
ಐಟಿ ಉದ್ಯೋಗಿಗಳಿಗೆ ಬೆಂಗಳೂರಿನ ಸಲೂನ್ ಮಾಲೀಕ ಆಸರೆ

By

Published : May 20, 2020, 12:27 PM IST

ಬೆಂಗಳೂರು:ನಗರದಲ್ಲಿ ಹೇರ್ ಕಟಿಂಗ್ ಸಲೂನ್‌ನ ಮಾಲೀಕರೊಬ್ಬರು ಕೆಲಸ ಕಳೆದುಕೊಂಡ ಐಟಿ ಉದ್ಯೋಗಿಗಳು ಮತ್ತು ಈಶಾನ್ಯ ರಾಜ್ಯ ಹಾಗೂ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ತಮ್ಮ ಸಲೂನ್‌ನಲ್ಲಿ ಆಶ್ರಯ ನೀಡಿದ್ದಾರೆ.

ಲಾಕ್​ಡೌನ್ ಘೋಷಣೆಯಾದ ಕ್ಷಣದಿಂದ ಹಲವಾರು ಕಡೆಯಿಂದ ದೂರುಗಳು ಬಂದವು. ಸಾಕಷ್ಟು ಜನರು ನಿರುದ್ಯೋಗಿಗಳಾದರು. ಕೆಲವರನ್ನು ಬಾಡಿಗೆ ಮನೆಗಳಿಂದ ಹೊರ ಹಾಕಲಾಯಿತು ಎಂದು ಸಲೂನ್​ ಮಾಲೀಕ ರಾಹುಲ್ ರಾಯ್ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳು ಮತ್ತು ನೇಪಾಳ ಮೂಲದವರಿಗೆ ಹೇರ್​ ಕಟಿಂಗ್ ತರಬೇತಿ ನೀಡುವ ನನ್ನ ಸಲೂನ್​ಅನ್ನು ಆಶ್ರಯ ಮನೆಯನ್ನಾಗಿ ಪರಿವರ್ತಿಸಿದ್ದೇನೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಘೋಷಣೆಯಾದ ನಂತರ ನಾನು ಕೆಲಸ ಕಳೆದುಕೊಂಡೆ. ಮಾಲೀಕರು ಕೂಡ ಬಾಡಿಗೆ ಮನೆಯಿಂದ ನನ್ನನ್ನು ಹೊರ ಹಾಕಿದರು. ಒಂದು ವಾರ ಕಾಲು ನಾನು ಹತ್ತಿರದ ಕೆರೆ ದಂಡೆಯಲ್ಲೇ ವಾಸ ಮಾಡಿದ್ದೇನೆ. ಫೇಸ್‌ಬುಕ್ ಮೂಲಕ ರಾಹುಲ್ ರಾಯ್ ಅವರನ್ನು ಸಂಪರ್ಕಿಸಿದೆ. ಇತರರೊಂದಿಗೆ ನನಗೂ ಕೂಡ ಜಾಗ ನೀಡಿದರು ಎಂದು ಆಶ್ರಯ ಪಡೆದ ವ್ಯಕ್ತಿಯೋರ್ವ ಹೇಳಿದ್ದಾನೆ.

ABOUT THE AUTHOR

...view details