ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ: ಇಬ್ಬರು ಅಂತರ್​​ರಾಜ್ಯ ಆರೋಪಿಗಳ ಬಂಧನ - Arrest of two interstate accused

ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿ ಬಳಿಯ ಯುಟಿಸಿ ಕಾಲೇಜ್​​ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಅಂತರ್​​ರಾಜ್ಯ ಆರೋಪಿಗಳ ಬಂಧನ
ಇಬ್ಬರು ಅಂತರ್​​ರಾಜ್ಯ ಆರೋಪಿಗಳ ಬಂಧನ

By

Published : Dec 23, 2020, 12:53 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಗಾಂಜಾ ಮಾರಾಟ ಮಾಡುವವರ ಮೇಲೆ ಎಷ್ಟೇ ದಾಳಿ ನಡೆಸಿದ್ರೂ, ಆರೋಪಿಗಳು ‌ಮಾತ್ರ ಗಾಂಜಾ ಮಾರಾಟ ಮಾಡುವ ಚಾಳಿ ಬಿಡ್ತಿಲ್ಲ. ಸದ್ಯ ಗಾಂಜಾ‌ ಮಾರಾಟ ಮಾಡುತ್ತಿದ್ದ, ಅಂತರ್​​ರಾಜ್ಯದ ಇಬ್ಬರು ಆರೋಪಿಗಳನ್ನ ಉತ್ತರ ವಿಭಾಗದ ಜೆ.ಸಿ. ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ

ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿ ಬಳಿಯ ಯುಟಿಸಿ ಕಾಲೇಜ್​​ ಬಳಿ ಕಾರಿನಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಬಂದಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿ ಸನ್ನದ್ ಹಾಗೂ ಮೊಹಮ್ಮದ್ ಬಿಲಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ

ಓದಿ: ಎರಡು ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದರು ಡಿಎಸ್ಪಿ ಲಕ್ಷ್ಮಿ

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾವನ್ನ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಟ್ರಕ್​​ನಲ್ಲಿ ‌ನಗರಕ್ಕೆ ತರುತ್ತಿದರು. ತದ‌ನಂತರ ವಿದ್ಯಾರ್ಥಿಗಳಿಗೆ, ಯುವಕರಿಗೆ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ 10.ಕೆ.ಜಿ ‌ಗಾಂಜಾ, ನಗದು ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ.

ABOUT THE AUTHOR

...view details