ಬೆಂಗಳೂರು: ಪಾರ್ಲಿಮೆಂಟ್ (ಸಂಸತ್ತು) ಎಂಬ ಹೆಸರಿನಲ್ಲಿ ನಗರದಲ್ಲಿ ಅಕ್ರಮ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಸಿಗರೇಟ್ ಮಾರಾಟ ಮಾಡುತ್ತಿರುವ ಆಸಾಮಿಗಳಿಗಾಗಿ ನಂದಿನಿ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ.
ಪಾರ್ಲಿಮೆಂಟ್ ಹೆಸರಿನಲ್ಲಿ ಸಿಗರೇಟ್ ಮಾರಾಟ: ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ - sale of cigarettes in the name of Parliament at Koramanagala in Bengaluru
ಪಾರ್ಲಿಮೆಂಟ್ (ಸಂಸತ್ತು) ಎಂಬ ಹೆಸರಿನಲ್ಲಿ ನಗರದಲ್ಲಿ ಅಕ್ರಮ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಸಿಗರೇಟ್ ಮಾರಾಟ ಮಾಡುತ್ತಿರುವ ಆಸಾಮಿಗಳಿಗಾಗಿ ನಂದಿನಿ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ.
ಪಾರ್ಲಿಮೆಂಟ್ ಹೆಸರಿನಲ್ಲಿ ಸಿಗರೇಟ್ ಮಾರಾಟ
ವಿದೇಶದಿಂದ ಅಕ್ರಮವಾಗಿ ತಂದ ತಂಬಾಕಿನಿಂದ ಸಿಗರೇಟ್ ತಯಾರಿಸಿ ದಾರಿಹೋಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಯಾಂಪಲ್ಸ್ಗಳನ್ನು ನೀಡಿ ಸಿಗರೇಟ್ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ನಗರದ ಪ್ರಮುಖ ಪ್ರದೇಶಗಳಾದ ಕೋರಮಂಗಲ, ಜೆಪಿ ನಗರ ಸೇರಿದಂತೆ ಹಲವೆಡೆ ಈ ದಂಧೆ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ವಿಡಿಯೋ ಹರಿದಾಡುತ್ತಿದ್ದಂತೆ ವಕೀಲರೊಬ್ಬರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.