ಬೆಂಗಳೂರು: ರಾಜ್ಯ ವಿಧಾನಮಂಡಲ ಸದಸ್ಯರ ವೇತನ ಪರಿಷ್ಕರಣೆಯಾಗಿದ್ದು, ಶಾಸಕರು ಮಾಸಿಕ 2.05 ಲಕ್ಷ ರೂ. ಪಡೆಯಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕರ್ನಾಟಕ ವಿಧಾನಸಭೆ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು.
ಈ ತಿದ್ದುಪಡಿ ಕಾಯ್ದೆ ಅಂಗೀಕಾರಗೊಳ್ಳುವ ಮೂಲಕ ಶಾಸಕರ ವೇತನ, ಭತ್ಯೆಗಳಲ್ಲಿ ಶೇ.50 ರಷ್ಟು ಏರಿಕೆ ಮಾಡಲು ಉಭಯ ಸದನಗಳಲ್ಲಿ ಅನುಮೋದನೆ ದೊರೆತಿತ್ತು. ಅಷ್ಟೇ ಅಲ್ಲದೇ, 5 ವರ್ಷಗಳಲ್ಲಿ ಒಮ್ಮೆ ಸ್ವಯಂ ಚಾಲಿತವಾಗಿ ಏರಿಕೆಗೂ ಈ ತಿದ್ದುಪಡಿ ಕಾಯ್ದೆಯ ಮೂಲಕ ಅನುಮೋದನೆ ನೀಡಲಾಗಿತ್ತು. 2022 ರ ಏ.1 ರಿಂದ ಪರಿಷ್ಕೃತ ವೇತನ ಜಾರಿಗೆ ಬಂದಿದೆ.