ಕರ್ನಾಟಕ

karnataka

ETV Bharat / state

ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ .. ವೇತನ ಬಿಡುಗಡೆ - Transport Minister Laxman Sawadi

ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರುವುದರಿಂದ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟು 4 ತಿಂಗಳುಗಳ ವೇತನ ಭರಿಸಲು ಈ ನಿರ್ಧಾರದಿಂದ ಅನುಕೂಲವಾದಂತಾಗಿದೆ. ಸಾರಿಗೆ ಸಂಸ್ಥೆ ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ವೇತನ ಬಿಡುಗಡೆ ಮಾಡಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಾರಿಗೆ ಸಚಿವ ಸವದಿ ಧನ್ಯವಾದ ತಿಳಿಸಿದ್ದಾರೆ.

dcsdsd
ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

By

Published : Jul 24, 2020, 10:05 PM IST

ಬೆಂಗಳೂರು: ಸಾರಿಗೆ ನೌಕರರ ಸಂಬಳ ಪಾವತಿಸಲು ಒಟ್ಟು 961 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಜೂನ್ ಮತ್ತು ಜುಲೈ ತಿಂಗಳ ಸಂಬಳಕ್ಕಾಗಿ 426 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ

ನೌಕರರಿಗೆ ಸಂಬಳ ಕೊಡಲು ಸಹ ಸಾರಿಗೆ ಇಲಾಖೆ ಖಜಾನೆಯಲ್ಲಿ ಹಣವಿರಲಿಲ್ಲ. ಜೂನ್ ತಿಂಗಳ ವೇತನ ಸಾರಿಗೆ ನಿಗಮದ ನೌಕರರಿಗೆ ಇನ್ನೂ ಪಾವತಿಯಾಗಿಲ್ಲ. ಕೆಲಸ ಮಾಡಿದರೂ ವೇತನ ಸಿಗದೆ ಸಂಕಷ್ಟದಲ್ಲಿ ಸಾರಿಗೆ ನೌಕರರು ಸಿಲುಕಿದ್ದರು. ಏಪ್ರಿಲ್ ಹಾಗೂ ಮೇ ತಿಂಗಳ ವೇತನ ಸರ್ಕಾರ ಪಾವತಿ ಮಾಡಿತ್ತು. ಆದರೆ ಇದೀಗ ಬಸ್ ಓಡಾಟ ನಡೆಸಿದರೂ ಸಹ ನಿಗಮಗಳಿಗೆ ಆದಾಯ ಬರುತ್ತಿಲ್ಲ. ಹೀಗಾಗಿ ವೇತನ ಪಾವತಿ ಮಾಡೋದೇ ಕಷ್ಟವಾಗಿದೆ. ಕೆಎಸ್ಆರ್​ಟಿಸಿಯ 37 ಸಾವಿರ ನೌಕರರು, ಬಿಎಂಟಿಸಿ 36 ಸಾವಿರ ನೌಕರರು, ಎನ್​​ಡಬ್ಲ್ಯೂಕೆಆರ್​ಟಿಸಿಯ 25 ಸಾವಿರ ನೌಕರರು, ಎನ್​ಇಕೆಆರ್​ಟಿಸಿಯ 22 ಸಾವಿರ ನೌಕರರಿಗೆ ಇನ್ನೂ ವೇತನ ಆಗಿಲ್ಲ.

ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರುವುದರಿಂದ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟು 4 ತಿಂಗಳುಗಳ ವೇತನ ಭರಿಸಲು ಈ ನಿರ್ಧಾರದಿಂದ ಅನುಕೂಲವಾದಂತಾಗಿದೆ. ಸಾರಿಗೆ ಸಂಸ್ಥೆ ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ವೇತನ ಬಿಡುಗಡೆ ಮಾಡಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಾರಿಗೆ ಸಚಿವ ಸವದಿ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details