ಕರ್ನಾಟಕ

karnataka

ETV Bharat / state

ಮಹಿಳಾ ಮತದಾರರನ್ನು ಸೆಳೆಯಲು ಬೆಂಗಳೂರಲ್ಲಿ ಸಖಿ ಮತಗಟ್ಟೆ - loksabha election, Sakhi vote booths, banglore, female voters, ಮಹಿಳಾ ಮತದಾರರು, ಸಖಿ ಮತಗಟ್ಟೆ

ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಗೆ ಸ್ಪೀಪ್ ಸಮಿತಿಯ ಸಹಕಾರದೊಂದಿಗೆ ಜನಸ್ನೇಹಿ ಸಖಿ ಮತಗಟ್ಟೆ. ಮಹಿಳಾ ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆಗಳು.

ಸಖಿ ಮತಗಟ್ಟೆ

By

Published : Apr 18, 2019, 10:19 AM IST

ಬೆಂಗಳೂರು: ಮಹಿಳಾ ಮತದಾರರನ್ನ ಸೆಳೆಯುವ ನಿಟ್ಟಿನಲ್ಲಿ ಸಖಿ ಮತಗಟ್ಟೆಗಳನ್ನ ಸಿಲಿಕಾನ್ ಸಿಟಿಯಲ್ಲಿ ತೆರೆಯಲಾಗಿದೆ‌. ಸ್ಪೀಪ್ ಸಮಿತಿಯ ಸಹಕಾರದೊಂದಿಗೆ ಜನಸ್ನೇಹಿ ಸಖಿ ಮತತಗಟ್ಟೆ ಸ್ಥಾಪಿಸಲಾಗಿದೆ.

ಇಂದು ಲೋಕಸಭೆ ಚುನಾವಣೆಯ ಹಿನ್ನೆಲೆ ಇಂತಹ ವಿಶೇಷವಾದ ಮತಗಟ್ಟೆಗಳನ್ನು ಸ್ಥಾಪನೆ ಮಾಡಿದ್ದು, ಇದ್ರಲ್ಲಿ ವಿಶೇಷವಾಗಿ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಾರೆ. ನೇರಳೆ ಬಣ್ಣದ ಮತಗಟ್ಟೆಗಳಲ್ಲಿ ನೇರಳೆ ಬಣ್ಣದ ಸೀರೆ, ಹಳದಿ ಬಣ್ಣದ ರವಿಕೆ ಧರಿಸಿಕೊಂಡು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಸಖಿ ಮತಗಟ್ಟೆ

ಸಖಿ ಅಂದರೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಇಲ್ಲಿ ಮತದಾನ ಮಾಡಬಹುದು. ನಿನ್ನೆ ಮಳೆ ಬಂದ್ರು ಕೂಡ ಚುನಾವಣೆ ಸಂಬಂಧ ಯಾವುದೇ ತೊಂದರೆಯಾಗಿಲ್ಲ. 7 ಗಂಟೆ ಸುಮಾರಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮಹಿಳಾ ಮತದಾರರನ್ನ ಸೆಳೆಯಲು ಸಖಿ ಮತಗಟ್ಟೆ ತೆರೆಯಲಾಗಿದೆ. ‌ಒಟ್ಟು 22 ಸಖಿ ಮತಗಟ್ಟೆಗಳನ್ನ ತೆರೆಯಲಾಗಿದೆ..

ಜನಸ್ನೇಹಿ ಮತದಾನ ಕೇಂದ್ರ ನಮ್ಮ ನಡೆ ನವ್ಯ ಭಾರತದ ಕಡೆ ಎಂಬ ಘೋಷಣೆಯನ್ನ ಬರೆದು ಹಾಕಿಕೊಂಡಿದ್ದು, ಮತದಾರರು ತಮ್ನ ಹಕ್ಕನ್ನು ಚಲಾಯಿಸುವಂತೆ ಪ್ರೇರೇಪಿಸುತ್ತಿದೆ.

ABOUT THE AUTHOR

...view details