ಕರ್ನಾಟಕ

karnataka

ETV Bharat / state

ಕ್ಯಾಬಿನೆಟ್ ಸಚಿವರಾಗಿ ಸುಧಾಕರ್ ಬಾಲಿಶ ಹೇಳಿಕೆ ದುರದೃಷ್ಟಕರ : ಹಿರಿಯ ಪತ್ರಕರ್ತ ಎಂ.ಸಿದ್ದರಾಜು - statement as Cabinet Minister

ಬೇಜವಾಬ್ದಾರಿ ಹೇಳಿಕೆಗಳು ಸುಮ್ಮನೆ ವಿವಾದಗಳನ್ನು ಹುಟ್ಟಿ ಹಾಕುತ್ತವೆ ಹೊರೆತು, ಇದರಿಂದ ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ತಮ್ಮ ಬಾಲಿಶ ಹೇಳಿಕೆಯಿಂದ ತಮ್ಮನ್ನು ತಾವು ಜನರ ಕಣ್ಣಲ್ಲಿ ಸಣ್ಣವರನ್ನಾಗಿಸಿಕೊಂಡಿದ್ದಾರೆ..

ಎಂ.ಸಿದ್ದರಾಜು
ಎಂ.ಸಿದ್ದರಾಜು

By

Published : Mar 24, 2021, 11:01 PM IST

ಬೆಂಗಳೂರು :ಆರೋಗ್ಯ ಸಚಿವರ ಏಕ ಪತ್ನಿ ವ್ರತಸ್ಥ ಪ್ರಮಾಣಪತ್ರ ಹಾಗೂ ರಾಜ್ಯದ 225 ಎಂಎಲ್​ಎಗಳು ಚಾರಿತ್ರ್ಯದ ಪರೀಕ್ಷೆ ಆಗಬೇಕು ಎಂಬ ಹೇಳಿಕೆಗೆ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಎಂ ಸಿದ್ದರಾಜು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಒಬ್ಬ ಕ್ಯಾಬಿನೆಟ್ ಸಚಿವನಾಗಿ ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ, ಸಾಮಾನ್ಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟರು.

ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಮಾಧ್ಯಮ ಅಕಾಡೆಮಿ ಮಾಜಿ ಛೇರ್ಮನ್ ಎಂ.ಸಿದ್ದರಾಜು

ಬೇಜವಾಬ್ದಾರಿ ಹೇಳಿಕೆ ನೀಡಿ ತಮ್ಮನ್ನು ತಾವೇ ಸಂಕಷ್ಟಕ್ಕೆ ಸಿಲಿಕಿಸಿಕೊಂಡಿದ್ದು, ಈ ಹೇಳಿಕೆ ನಮ್ಮನ್ನಾಳುವ ಸರ್ಕಾರದ ಹಿರಿಯ ಸಚಿವನಿಂದ ಬಂದಿರುವುದು ತುಂಬಾ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ಜನಪ್ರತಿನಿಧಿಗಳು ತಮ್ಮ ಹೆಂಡತಿಯರ ಜೊತೆ ನಿಷ್ಠರಾಗಿಲ್ಲ ಎನ್ನುವಂತಿದೆ. ರಾಜ್ಯದ 225 ಜನಪ್ರಧಿನಿಧಿಗಳಲ್ಲಿ 7 ಮಹಿಳಾ ಶಾಸಕಿಯರಿದ್ದಾರೆ ಎಂಬುದನ್ನು ಸಚಿವರು ಮರೆತಂತಿದೆ.

ಬೇಜವಾಬ್ದಾರಿ ಹೇಳಿಕೆಗಳು ಸುಮ್ಮನೆ ವಿವಾದಗಳನ್ನು ಹುಟ್ಟಿ ಹಾಕುತ್ತವೆ ಹೊರೆತು, ಇದರಿಂದ ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ತಮ್ಮ ಬಾಲಿಶ ಹೇಳಿಕೆಯಿಂದ ತಮ್ಮನ್ನು ತಾವು ಜನರ ಕಣ್ಣಲ್ಲಿ ಸಣ್ಣವರನ್ನಾಗಿಸಿಕೊಂಡಿದ್ದಾರೆ ಎಂದರು.

ABOUT THE AUTHOR

...view details