ಬೆಂಗಳೂರು:ಇಶಾ ಫೌಂಡೇಶನ್ ವತಿಯಿಂದ ಆರಂಭವಾಗಿರುವ ಕಾವೇರಿ ಕೂಗು ಅಭಿಯಾನದ ಬೈಕ್ ಜಾಥಾಕ್ಕೆ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಮುಂಭಾಗದಲ್ಲಿ ಚಾಲನೆ ದೊರಕಿತು.
ಕಾವೇರಿ ಕೂಗು ಅಭಿಯಾನ: ಬೆಂಗಳೂರಿನಲ್ಲಿ ಬೈಕ್ ಜಾಥಾಗೆ ಚಾಲನೆ - ಕಾವೇರಿ ಕೂಗು ಅಭಿಯಾನ
ಕಾವೇರಿ ಕೂಗು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಚಳವಳಿಗೆ ರಾಜ್ಯದ ಪ್ರಮುಖರು ಕೂಡ ಕೈಜೋಡಿಸಲು ಮುಂದಾಗಿದ್ದಾರೆ. ಇಂದು ಸದ್ಗುರು ವಾಸುದೇವ್ ನೇತೃತ್ವದಲ್ಲಿ ಬೈಕ್ ಜಾಥಾ ನಡೆಸಲಾಗಿದ್ದು, ಕಂಠೀರವ ಕ್ರೀಡಾಂಗಣದಿಂದ ಕಸ್ತೂರಬಾ ರಸ್ತೆ, ರಾಜಭವನ, ಮೇಕ್ರಿ ಸರ್ಕಲ್ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಸಾಗಿ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕೊನೆಗೊಂಡಿತು.
ಸದ್ಗುರು ವಾಸುದೇವ್ ನೇತೃತ್ವದಲ್ಲಿ ಬೈಕ್ ಜಾಥಾ ಕಂಠೀರವ ಕ್ರೀಡಾಂಗಣದಿಂದ ಕಸ್ತೂರಬಾ ರಸ್ತೆ, ರಾಜಭವನ, ಮೇಕ್ರಿ ಸರ್ಕಲ್ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಸಾಗಿ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕೊನೆಗೊಂಡಿತು.
ಈ ವೇಳೆ ಮಾತನಾಡಿದ ಸದ್ಗುರು ವಾಸುದೇವ್, ನೀರಿನ ಸಮಸ್ಯೆಯ ಬಗ್ಗೆ ಈಗ ಎಚ್ಚೆತ್ತುಕೊಳ್ಳಲಾಗಿದೆ. ಕಾವೇರಿ ಕೂಗು ಅಭಿಯಾನ ಭವಿಷ್ಯದಲ್ಲಿ ಆಗುವ ಅನಾಹುತವನ್ನು ತಪ್ಪಿಸಲಿದೆ. ಲಂಡನ್ನಲ್ಲಿ ಒಬ್ಬರಿಗೆ ಒಂದು ಮರವಿದೆ. ಆದರೆ, ಬೆಂಗಳೂರಿನಲ್ಲಿ 84 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಆದರೆ ಮರಗಳಿರುವುದು ಕೇವಲ15 ಲಕ್ಷ ಮಾತ್ರ. ಮರಗಳನ್ನು ನೆಟ್ಟರೆ ಬೆಂಗಳೂರಿನಲ್ಲಿ ಸಿಗುವ ನೀರು ಸಾಕು. ಮರಗಳನ್ನು ನೆಟ್ಟು ಬೆಂಗಳೂರನ್ನು ರಕ್ಷಿಸಬಹುದು. ಮುಂದೆ ಈ ಅಭಿಯಾನ ಚೆನ್ನೈ ನಗರವನ್ನು ತಲುಪಲಿದೆ. ಆಗ ಈ ಅಭಿಯಾನದ ಮೂಲಕ ಅರಿವು ಹೆಚ್ಚಾಗಲಿದೆ ಎಂದರು. ಬೈಕ್ ರ‍್ಯಾಲಿಯಲ್ಲಿ ನೂರಾರು ಬೈಕ್ ಸವಾರರು ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.