ಬೆಂಗಳೂರು:ಸಚಿವ ಸ್ಥಾನವನ್ನು ಯಾವುದೋ ಜಿಲ್ಲೆ, ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಕೊಡಬೇಕಂತ ಇಲ್ಲ. ಸಮಸ್ತ ಕರ್ನಾಟಕದ ಹಿತದೃಷ್ಟಿ ಹಾಗೂ ಅನುಭವ ಉಳ್ಳವರಿಗೆ ಮೊದಲ ಅವಕಾಶ ನೀಡಲಾಗಿದೆ. ಇನ್ನೂ ಅವಕಾಶ ಇದೆ. ಯಾರು ಬೇಸರ ಪಡುವ ಹಾಗಿಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುವ ಯಾರಿಗಾದರೂ ಅವಕಾಶ ಕೊಡಬಹುದು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ಜಿಲ್ಲೆ, ಪ್ರಭಾವಿ ವ್ಯಕ್ತಿ ಅಥವಾ ಜಾತಿಗೆ ಸಚಿವ ಸ್ಥಾನ ಕೊಡಬೇಕಂತೇನಿಲ್ಲ: ಸದಾನಂದಗೌಡ
ಸಚಿವ ಸ್ಥಾನವನ್ನು ಯಾವುದೋ ಜಿಲ್ಲೆ, ಪ್ರಭಾವಿ ವ್ಯಕ್ತಿಗೆ ಅಥವಾ ಜಾತಿಗೆ ಕೊಡಬೇಕಂತ ಇಲ್ಲ. ಸಮಸ್ತ ಕರ್ನಾಟಕದ ಹಿತದೃಷ್ಟಿ ಹಾಗೂ ಅನುಭವ ಉಳ್ಳವರಿಗೆ ಮೊದಲ ಅವಕಾಶ ನೀಡಲಾಗಿದೆ. ಇನ್ನೂ ಅವಕಾಶ ಇದೆ. ಯಾರು ಬೇಸರ ಪಡುವ ಹಾಗಿಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುವ ಯಾರಿಗಾದರೂ ಅವಕಾಶ ಕೊಡಬಹುದು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ರಾಜಭವನದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿದರು.
ಸರ್ಕಾರ ರಚನೆಯಾದ ನಂತರ ಮಳೆಯಿಂದಾಗಿ ಪ್ರವಾಹ ಬಂದು ಬಹಳ ಸಮಸ್ಯೆಯಾಗಿತ್ತು. ಹೀಗಾಗಿ ಅಲ್ಲಿಗೆ ಕೇಂದ್ರದ ಮುಖಂಡರು ಹಾಗೂ ರಾಜ್ಯದ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು.
ಸಮಯಾವಕಾಶ ಇರದ ಕಾರಣ ಸ್ವಲ್ಪ ತಡವಾಗಿ ಸಚಿವ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರು ಕೂಡ ಕೇಂದ್ರದ ಹಿರಿಯ ರಾಜಕಾರಣಿಗಳು ಚರ್ಚೆ ಮಾಡಿ ಪ್ರಾರಂಭಿಕ ಹಂತವಾಗಿ 17 ಸಚಿವರಿಗೆ ಅವಕಾಶ ನೀಡಿದ್ದಾರೆ. ಇನ್ನು ಮತ್ತೊಂದು ಹಂತದಲ್ಲಿ ಈಗ ಸಿಗದ ಸಚಿವರಿಗೆ ಅವಕಾಶ ನೀಡಲಾಗುವುದು ಎಂದರು.