ಬೆಂಗಳೂರು:ಒಂದು ಕಡೆ ಡಿ.ಕೆ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಕ್ಕೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂತೋಷದಿಂದ ಕುಣಿದಾಡಿದ್ರೆ, ಮತ್ತೊಂದು ಕಡೆ ಅವರಿಗೆ ಸ್ವಾಗತ ಕೋರಲು ಬಂದ ಜನಸಾಗರದಿಂದ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ ಕಿರಿ ಕಿರಿ ಉಂಟಾಗಿದೆ. ಇದರ ಜೊತೆಯಲ್ಲಿ ಆಂಬ್ಯುಲೆನ್ಸ್ಗೂ ಟ್ರಾಫಿಕ್ ಬಿಸಿ ತಟ್ಟಿತು.
ಡಿಕೆಶಿ ಆಗಮನ ಹಿನ್ನೆಲೆ ಟ್ರಾಫಿಕ್ ಜಾಮ್: ಟ್ರಾಫಿಕ್ನಲ್ಲಿ ಸಿಲುಕಿದ ಆಂಬ್ಯುಲೆನ್ಸ್ - ಡಿಕೆಶಿ ಆಗಮನ ಹಿನ್ನೆಲೆ ಸಾದಹಳ್ಳಿ ಗೇಟ್ ಟ್ರಾಫಿಕ್ ಜಾಮ್
ಡಿಕೆಶಿ ಆಗಮನ ಹಿನ್ನೆಲೆ ಸಾದಹಳ್ಳಿ ಗೇಟ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕೆ ಪೊಲೀಸರ ಹರಸಾಹಸ ಪಡುವಂತಾಗಿದೆ.
![ಡಿಕೆಶಿ ಆಗಮನ ಹಿನ್ನೆಲೆ ಟ್ರಾಫಿಕ್ ಜಾಮ್: ಟ್ರಾಫಿಕ್ನಲ್ಲಿ ಸಿಲುಕಿದ ಆಂಬ್ಯುಲೆನ್ಸ್](https://etvbharatimages.akamaized.net/etvbharat/prod-images/768-512-4877213-thumbnail-3x2-dktraffic.jpg)
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾದಹಳ್ಳಿ ಗೇಟ್ಗೆ ಡಿ. ಕೆ ಶಿವಕುಮಾರ್ ಬರುತ್ತಾರೆ ಎಂದು ತಿಳಿಯುತ್ತಿದ್ದಂತೆ ಸಾದಹಳ್ಳಿ ಗೇಟ್ ಬಳಿ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ನೆರೆದಿದ್ದಾರೆ. ಒಂದು ಕಡೆ ಡಿ.ಕೆ ಶಿವಕುಮಾರ್ ಅವರನ್ನು ಸಾವಿರಾರು ಜನರು ಆಗಮಿಸಿ ಬರಮಾಡಿಕೊಂಡರೆ. ಮತ್ತೊಂದು ಕಡೆ ಏರ್ಪೋರ್ಟ್ ಹಾಗೂ ದೇವನಹಳ್ಳಿ, ಚಿಕ್ಕಬಳ್ಳಾಪುರ, ಬೆಂಗಳೂರು ಕಡೆಯಿಂದ ಪ್ರಯಾಣಿಸುವ ವಾಹನ ಸವಾರರಿಗೆ ಬಾರಿ ಕಿರಿಕಿರಿ ಉಂಟಾಯ್ತು. ದೇವನಹಳ್ಳಿ ಟೋಲ್ನಿಂದ ಸಾದಹಳ್ಳಿ ಗೇಟ್ ಹಾಗೂ ಚಿಕ್ಕಜಾಲದಿಂದ ಸಾದಹಳ್ಳಿ ಗೇಟ್ವರೆಗೆ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಯ್ತು. ಇದರಿಂದ ವಾಹನ ಸವಾರರಿಗೆ ಅಷ್ಟೇ ಅಲ್ಲದೇ ಆಂಬ್ಯುಲೆನ್ಸ್ಗೂ ಇದರ ಬಿಸಿ ತಟ್ಟಿತು.
ಮೂರು ನಾಲ್ಕು ಕಿಲೋಮೀಟರ್ಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕೆ ಚಿಕ್ಕಜಾಲ, ಏರ್ಪೋರ್ಟ್, ದೇವನಹಳ್ಳಿ, ಯಲಹಂಕ ಸೇರಿದಂತೆ ಸುತ್ತಮುತ್ತಲಿನ ಪೊಲೀಸರು ಹರಸಾಹಸ ಪಟ್ಟರು.