ಬೆಂಗಳೂರು: ಬೆಡ್ಗಾಗಿ ಸಾಲುಮರದ ತಿಮ್ಮಕ್ಕ ತೀವ್ರ ಪರದಾಟ ನೆಡೆಸಿರುವುದು ಬೆಳಕಿಗೆ ಬಂದಿದ್ದು, ಕೋವಿಡೇತರ ಹಾಸಿಗೆಗಾಗಿ ಪರಿಪಾಟಲು ಪಟ್ಟಿದ್ದಾರೆ.
ಸಾಲುಮರದ ತಿಮ್ಮಕ್ಕನಿಗೂ ಕಾಡಿದ ಬೆಡ್ ಕೊರತೆ.. ನಾನ್ ಕೋವಿಡ್ ಬೆಡ್ಗಾಗಿ 2 ಗಂಟೆ ಪರದಾಟ - ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ರಾಜ್ಯದಲ್ಲಿ ಕೋವಿಡ್ ಹಾಗೂ ಕೋವಿಡ್ ಏತರ ರೋಗಿಗಳಿಗೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಸಾಲು ಮರದ ತಿಮ್ಮಕ್ಕನಿಗೂ ಈ ಸಮಸ್ಯೆ ಎದುರಾಗಿದ್ದು, ಸತತ 2 ಗಂಟೆಯ ಬಳಿಕ ನಾನ್ ಕೋವಿಡ್ ಬೆಡ್ ವ್ಯವಸ್ಥೆಯಾಗಿದೆ.
ಸಾಲುಮರದ ತಿಮ್ಮಕ್ಕನಿಗೂ ಕಾಡಿದ ಬೆಡ್ ಕೊರತೆ
ಬಚ್ಚಲು ಮನೆಯಲ್ಲಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ತಿಮ್ಮಕ್ಕರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಮತ್ತೆ ಅದೇ ಜಾಗಕ್ಕೆ ತೀವ್ರ ಪೆಟ್ಟಾಗಿದ್ದು, ಎರಡು ಗಂಟೆಯಿಂದ ಹಾಸಿಗೆಗಾಗಿ ತೀವ್ರ ಪರದಾಟ ನಡೆಸಿರುವುದಾಗಿ ತಿಳಿದು ಬಂದಿದೆ.
ನಾನ್ ಕೋವಿಡ್ ಬೆಡ್ ಹೊಂದಿಸಲು ಅಪೋಲೋ ಆಸ್ಪತ್ರೆಯ ವೈದ್ಯರು ಸರ್ವ ಪ್ರಯತ್ನ ನಡೆಸಿದ್ದು, ಅಪೋಲೋ ಆಸ್ಪತ್ರೆ ವೈದ್ಯರು ಉಚಿತ ಚಿಕಿತ್ಸೆ ಸಹ ನೀಡುತ್ತಿದ್ದಾರೆ. ಕೋವಿಡ್ ರೋಗಿಗಳು ತುಂಬಿರುವುದರಿಂದ ವೈದ್ಯರು ಸಹ ಹಾಸಿಗೆ ಹೊಂದಿಸಲು ಹರಸಾಹಸ ಪಟ್ಟಿದ್ದು, ಕೊನೆಗೂ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ.