ಕರ್ನಾಟಕ

karnataka

ETV Bharat / state

ಹಾಲಿನ ದರ ಏರಿಕೆ ಪ್ರಸ್ತಾಪ, ಸಿಎಂರದ್ದೇ ಅಂತಿಮ ತೀರ್ಮಾನ: ಸಚಿವ ಎಸ್ ಟಿ ಸೋಮಶೇಖರ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಾಂತ್ರಿಕ ಅಡಚಣೆ ಕಾರಣಗಳನ್ನು ನೀಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿಗಳ ಮೂಲಕ ಮನವಿ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್​ ತಿಳಿಸಿದ್ದಾರೆ.

ಸಚಿವ ಎಸ್ ಟಿ ಸೋಮಶೇಖರ್
ಸಚಿವ ಎಸ್ ಟಿ ಸೋಮಶೇಖರ್

By

Published : Oct 19, 2022, 6:04 PM IST

ಬೆಂಗಳೂರು: ಹಾಲಿನ ದರ ಹೆಚ್ಚಳ ಕೋರಿ‌ 14 ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಸ್ತಾವನೆ ಸಲ್ಲಿಸಿ ಒತ್ತಾಯಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಅಂತಿಮ ತೀರ್ಮಾನಕ್ಕೆ ಬಿಟ್ಟದ್ದು ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಿಸಿದ ಮೊತ್ತವನ್ನು ಹಾಲು ಉತ್ಪಾದಕರಿಗೆ ಹಂಚುತ್ತೇವೆ. ದರ ಏರಿಕೆಗೆ‌ ರೈತರು ಒತ್ತಡ ಹೇರಿರುವ ಕಾರಣ ಈ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಂಘಗಳು ನಿವೇದಿಸಿಕೊಂಡಿದ್ದು, ಸಿಎಂ ಜೊತೆಗೆ ಚರ್ಚಿಸುವೆ ಎಂದರು.

ಸಚಿವ ಎಸ್ ಟಿ ಸೋಮಶೇಖರ್ ಅವರು ಮಾತನಾಡಿದರು

ತಾಂತ್ರಿಕ ಅಡಚಣೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಾಂತ್ರಿಕ ಅಡಚಣೆ ಕಾರಣಗಳನ್ನು ನೀಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿಗಳ ಮೂಲಕ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಹಕಾರ ಸಪ್ತಾಹ: ನ. 14 ರಿಂದ 20ರವರೆಗೆ ಸಹಕಾರ ಆಯೋಜಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಏಳು ದಿನಗಳ ಕಾರ್ಯಕ್ರಮ ನಡೆಯಲಿವೆ. ಈ ಬಾರಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಸಹಕಾರ ಧುರೀಣರನ್ನು ಪರಿಗಣಿಸಲಾಗುವುದು. ಜಿಲ್ಲಾಮಟ್ಟದ ಸಹಕಾರ ರತ್ನ ಪ್ರಶಸ್ತಿ ಆಯಾ ಜಿಲ್ಲೆಯಲ್ಲಿ ಘೋಷಣೆಯಾಗಲಿವೆ ಎಂದು ಹೇಳಿದರು.

ಇದನ್ನೂ ಓದಿ:ಹಬ್ಬಗಳ ಸೀಸನ್​ನಲ್ಲೇ ಗ್ರಾಹಕರಿಗೆ ಶಾಕ್​.. ಅಮುಲ್, ಮದರ್ ಡೈರಿ ಹಾಲಿನ ದರ ಏರಿಕೆ

ABOUT THE AUTHOR

...view details