ಬೆಂಗಳೂರು:ರಾಕೆಟ್ವಿಜ್ಞಾನಿ ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿತ್ತು. ಇಂದು (ಶುಕ್ರವಾರ) ಇಸ್ರೋ ಅಧ್ಯಕ್ಷರಾಗಿ ಎಸ್.ಸೋಮನಾಥ್ ಅಧಿಕಾರವಹಿಸಿಕೊಂಡರು.
ಸೋಮನಾಥ್ ಅವರು ಕೇರಳ ಕೊಲ್ಲಂನ ಟಿ.ಕೆ.ಎಂ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್.ಸಿ)ಯಲ್ಲಿ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಇವರು 1985ರಲ್ಲಿ ಇಸ್ರೋ ಸೇರಿದ್ದರು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿ.ಎಸ್.ಎಲ್.ವಿ) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿ.ಎಸ್.ಎಲ್.ಜಿ) ಯೋಜನೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.