ಕರ್ನಾಟಕ

karnataka

ETV Bharat / state

ಮನ್ಸೂರ್​ ವಿರುದ್ಧ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲು ಎಸ್​ಐಟಿ ಪ್ರಸ್ತಾವನೆ - ವಂಚನೆ ಪ್ರಕರಣ

ವಂಚಕ‌ ಮನ್ಸೂರ್ ಖಾನ್ ಪಾಸ್​ಪೋರ್ಟ್​ ರದ್ದು​ ಮಾಡುವಂತೆ ಪಾಸ್​ಪೋರ್ಟ್ ಇಲಾಖೆಗೆ ಎಸ್​ಐಟಿ ಪತ್ರ ಬರೆದ ಬೆನ್ನಲೇ ಇದೀಗ ರೆಡ್​ ಕಾರ್ನರ್​ ಬದಲಿಗೆ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲು ರಾಜ್ಯ ಸಿಐಡಿ ವಿಭಾಗದಲ್ಲಿರುವ ಇಂಟರ್ ಪೋಲ್​ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಮನ್ಸೂರ್​ ವಿರುದ್ಧ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲು ಎಸ್​ಐಟಿ ಪ್ರಸ್ತಾವನೆ

By

Published : Jun 23, 2019, 3:54 AM IST

ಬೆಂಗಳೂರು:ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮೊಹಮ್ಮದ್​ ಮನ್ಸೂರ್​ ವಿರುದ್ಧ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲು ಎಸ್​ಐಟಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ವಂಚಕ‌ ಮನ್ಸೂರ್ ಖಾನ್ ಪಾಸ್​ಪೋರ್ಟ್​ ರದ್ದು​ ಮಾಡುವಂತೆ ಪಾಸ್​ಪೋರ್ಟ್ ಇಲಾಖೆಗೆ ಎಸ್​ಐಟಿ ಪತ್ರ ಬರೆದ ಬೆನ್ನಲೇ ಇದೀಗ ರೆಡ್​ ಕಾರ್ನರ್​ ಬದಲಿಗೆ ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲು ರಾಜ್ಯ ಸಿಐಡಿ ವಿಭಾಗದಲ್ಲಿರುವ ಇಂಟರ್ ಪೋಲ್​ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ. ಸಿಐಡಿ ಇಂಟರ್ ಪೋಲ್​ನಿಂದ ಸಿಬಿಐ ಕೇಂದ್ರ ಕಚೇರಿಯ ಇಂಟರ್ ಪೋಲ್​ ವಿಭಾಗಕ್ಕೆ ಪತ್ರ ತಲುಪಿದ್ದು, ಅಲ್ಲಿಂದ ಫ್ರಾನ್ಸ್​​ನಲ್ಲಿರುವ ಮುಖ್ಯ ಕಚೇರಿಗೆ ತಲುಪಲಿದೆ. ಬಳಿಕ ವಿಶ್ವದ ಸದಸ್ಯ ರಾಷ್ಟ್ರಗಳಿಗೆ ಬ್ಲೂ ಕಾರ್ನರ್ ನೋಟಿಸ್​ ರವಾನೆಯಾಗಲಿದೆ.

ಸ್ವದೇಶದಲ್ಲಿ ಅಪರಾಧ ಕೃತ್ಯ ಎಸಗಿ ವಿದೇಶದಲ್ಲಿ ತಲೆಮರೆಸಿಕೊಳ್ಳುವ ಆರೋಪಿಗಳನ್ನು ಮತ್ತೆ ಭಾರತಕ್ಕೆ ಕರೆತರಲು ಪೊಲೀಸ್​ ವ್ಯವಸ್ಥೆಯಲ್ಲಿ ಎಂಟು ರೀತಿಯ ಮಾರ್ಗಗಳಿವೆ. ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್, ಗ್ರೀನ್ ನೋಟಿಸ್, ಎಲ್ಲೋ ನೋಟಿಸ್, ಬ್ಲ್ಯಾಕ್ ನೋಟಿಸ್, ಆರೆಂಜ್ ನೋಟಿಸ್, ಪರ್ಪಲ್ ನೋಟಿಸ್ ಹಾಗೂ ಇಂಟರ್ ಪೋಲ್ ಅನ್ ಸೆಕ್ಯೂರಿಟಿ ಕೌನ್ಸಿಲ್ ಅರ್ಥಾತ್ ಸ್ಪೆಷಲ್ ನೋಟಿಸ್ ಹೀಗೆ ಎಂಟು ರೀತಿಯಲ್ಲಿ ನೋಟಿಸ್​ಗಳಿವೆ.

  • ರೆಡ್ ಕಾರ್ನರ್ ನೋಟಿಸ್:ಅಪರಾಧ ಎಸಗಿ ಬೇರೆ ದೇಶದಲ್ಲಿ ಬೀಡುಬಿಟ್ಟಿರುವ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೇರೆ ದೇಶಗಳಿಗೆ ಹೊರಡಿಸುವುದೇ ರೆಡ್​ ಕಾರ್ನರ್​ ನೋಟಿಸ್​. ಆರೋಪಿ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಸಿದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ನೋಟಿಸ್ ಹೊರಡಿಸಲು ಸಾಧ್ಯವಾಗಲಿದೆ.
  • ಬ್ಲೂ ಕಾರ್ನರ್ ನೋಟಿಸ್: ಆರೋಪಿ ನಿರ್ದಿಷ್ಟ ದೇಶದಲ್ಲಿದ್ದಾನೆ ಎಂಬ ಮಾಹಿತಿ ಪೊಲೀಸ್ ಅಧಿಕಾರಿಗಳಿಗೆ ಇದ್ದರೆ. ಆರೋಪಿ ಎಲ್ಲಿದ್ದಾನೆ, ಯಾವ ಲೊಕೇಷನ್​ನಲ್ಲಿದ್ದಾನೆ ಎಂಬುದರ ಕುರಿತು ಮಾಹಿತಿ ಪಡೆಯುವುದಕ್ಕೆ ಹೊರಡಿಸುವುದೇ ಬ್ಲೂ ಕಾರ್ನರ್ ನೋಟಿಸ್.
  • ಗ್ರೀನ್​ ಕಾರ್ನರ್ ನೋಟಿಸ್:ಆರೋಪಿಯು ಸ್ವದೇಶದಲ್ಲಿ ಅಪರಾಧವೆಸಗಿ ಬೇರೆ ದೇಶದಲ್ಲಿ ತಲೆಮರೆಸಿಕೊಂಡರೆ ಆರೋಪಿಗೆ ಎಚ್ಚರಿಕೆ ನೀಡಿ ಆತನಿಗೆ ಲೀಗಲ್ ನೋಟಿಸ್ ಜಾರಿ ಮಾಡಿ ವಿದೇಶದಲ್ಲೂ ಅದೇ ಅಪರಾಧ ಎಸಗದಂತೆ ಈ ನೊಟೀಸ್​ ಸಹಾಯವಾಗಲಿದೆ.
  • ಹಳದಿ ನೋಟಿಸ್:ಯಾವುದೇ ವ್ಯಕ್ತಿ ಸ್ವದೇಶದಿಂದ ಆಕಸ್ಮಿಕವಾಗಿ ಕಾಣೆಯಾಗಿ ಬೇರೆ ದೇಶಕ್ಕೆ ಹೋಗಿ ತಪ್ಪಿಸಿಕೊಂಡರೆ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಅವರಿಗೆ ಸಿಗದ ಸಂದರ್ಭದಲ್ಲಿ ಯಾರಾದರೂ ನಾಪತ್ತೆ ದೂರು ಕೊಟ್ಟರೆ ಆ ವ್ಯಕ್ತಿಯ ವಿಳಾಸ ಹಾಗೂ ವಿವರ ಕಂಡು ಹಿಡಿಯುವ ಸಲುವಾಗಿ ಹೊರಡಿಸುವ ನೋಟಿಸ್ ಇದಾಗಿದೆ.
  • ಬ್ಲ್ಯಾಕ್ ನೋಟಿಸ್: ​ಒಂದು ವೇಳೆ ಯಾವುದೇ ವ್ಯಕ್ತಿ ಕಾರಣವಿಲ್ಲದೆ ಕೊಲೆಯಾಗಿದ್ದರೆ ಅಥವಾ ಯಾವುದೇ ಮಾಹಿತಿ ಇಲ್ಲದೆ ಶವವಾಗಿ ಹೋಗಿದ್ದರೆ ಬ್ಲ್ಯಾಕ್ ನೊಟೀಸ್ ಹೊರಡಿಸಬಹುದು. ಈ ಮೂಲಕ ವ್ಯಕ್ತಿಯ ಚಹರೆ ಹಾಗೂ ಶವವಾಗಿ ಹೋದ ವ್ಯಕ್ತಿಯ ವಿಳಾಸ ಕಂಡುಹಿಡಿಯಲು ಉಪಯೋಗವಾಗಲಿದೆ.
  • ಆರೆಂಜ್ ನೋಟಿಸ್:ಯಾರಾದರೂ ಸಮಾಜಕ್ಕೆ ಕಂಟಕ ತರುತ್ತಿದ್ದಾರೆ ಎಂದು ಗುಮಾನಿ ವ್ಯಕ್ತವಾದರೆ ಅದನ್ನ ತಕ್ಷಣ ನಿಲ್ಲಿಸುವಂತೆ ಹೊರಡಿಸುವುದೇ ಆರೆಂಜ್ ನೋಟಿಸ್.
  • ಪರ್ಪಲ್ ನೋಟಿಸ್: ಯಾರಾದರೂ ಅಪರಾಧ ಕೃತ್ಯವೆಸಗಲು ಬಳಸುವ ಮಾರಕಾಸ್ತ್ರ ಅಥವಾ ಆಯುಧಗಳನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಅದನ್ನು ಮರೆ ಮಾಚಿದರೆ ಅದರ ಬಗ್ಗೆ ವಿವರ ತೆಗೆದುಕೊಳ್ಳಲು ಹೊರಡಿಸುವ ನೋಟಿಸ್ ಇದಾಗಿದೆ.
  • ಸ್ಪೆಷಲ್ ನೋಟಿಸ್:ಯಾವುದಾದರೂ ಗುಂಪು ಆಯಾ ದೇಶದ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರ ಬಗ್ಗೆ ಗುಪ್ತಚರ ಮೂಲಕ ಮಾಹಿತಿ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಯುಎನ್ ಸೆಕ್ಯೂರಿಟಿ ಕೌನ್ಸಿಲ್ ಸ್ಯಾಂಕ್ಷನ್ ಕಮಿಟಿ ಮೂಲಕ ಈ ಇಂಟರ್ ಪೋಲ್ ಅಂಡ್​ ಸೆಕ್ಯೂರಿಟಿ ಅಂದರೆ ಸ್ಪೆಷಲ್ ನೋಟಿಸ್ ಹೊರಡಿಸಲು ಸಾಧ್ಯವಾಗಲಿದೆ.

ABOUT THE AUTHOR

...view details