ಬಳ್ಳಾರಿ:ನಗರದ ಅಲ್ಲೀಪುರ ಬಳಿಯಿರುವ ರಾಮೇಶ್ವರಿ ನಗರದ ದಯಾಶಂಕರ ಗುರುಕುಲ ಆಶ್ರಮದಲ್ಲಿಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಲೀಡ್ ವಿದ್ಯಾರ್ಥಿಗಳು ವಿಶ್ವ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿಆಚರಿಸಿದರು.
ಅನಾಥ ಮಕ್ಕಳೊಂದಿಗೆ ಸ್ನೇಹಿತರ ದಿನ ಆಚರಿಸಿದ ಆರ್ವೈಎಂಇಸಿ ಕಾಲೇಜು ವಿದ್ಯಾರ್ಥಿಗಳು - ಬಳ್ಳಾರಿ ಇಂಜಿನಿಯರಿಂಗ್ ಕಾಲೇಜ್
ನಗರದ ಅಲ್ಲೀಪುರ ಬಳಿಯಿರುವ ರಾಮೇಶ್ವರಿ ನಗರದ ದಯಾಶಂಕರ ಗುರುಕುಲ ಆಶ್ರಮದಲ್ಲಿಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಲೀಡ್ನ ವಿದ್ಯಾರ್ಥಿಗಳು ವಿಶ್ವ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿಆಚರಿಸಿದರು.
ಅನಾಥ ಮಕ್ಕಳೊಂದಿಗೆ ಸ್ನೇಹಿತರ ದಿನ ಆಚರಿಸಿದ ಆರ್ವೈಎಂಇಸಿ ಕಾಲೇಜು ವಿದ್ಯಾರ್ಥಿಗಳು
ಆರ್ವೈಎಂಇಸಿ ಕಾಲೇಜಿನ ಯುವಕ, ಯುವತಿಯರು ದಯಾಶಂಕರ ಗುರುಕುಲ ಆಶ್ರಮದ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮಿಸಿದರು. ಈ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷವೂ ಕೂಡ ಈ ಆಶ್ರಮಕ್ಕೆ ಬಂದು ಸ್ನೇಹಿತರ ದಿನ ಆಚರಿಸುತ್ತಾರೆ. ಆಶ್ರಮದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ,ಆಶ್ರಮದ ಮಕ್ಕಳ ಪ್ರತಿಭೆಯನ್ನು ಹೊರತರುತ್ತಾರೆ.
ಈ ವರ್ಷವೂ ಕೂಡ ಮಕ್ಕಳಿಗೆ ಚಿತ್ರಕಲೆ, ಆಶುಭಾಷಣ, ಏಕಪಾತ್ರ ಅಭಿನಯ, ಚಲನಚಿತ್ರ ಹಾಡುಗಳಿಗೆ ಸಾಮೂಹಿಕವಾಗಿ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮ ಆಯೋಜಿಸಿದ್ದರು.