ಎಂಎಸ್ಎಂಇ ಪುನಶ್ಚೇತನಕ್ಕೆ ಸಲಹೆ: ನಿರ್ಮಲಾ ಸೀತಾರಾಮನ್ಗೆ ದೇಶಪಾಂಡೆ ಪತ್ರ - RV Deshpande
ಎಂಎಸ್ಎಂಇ ಪುನಶ್ಚೇತನಕ್ಕೆ ಹಲವು ಸಲಹೆ ನೀಡಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಉದ್ಯಮಗಳ ಮಾರ್ಚ್ನಿಂದ ಸೆಪ್ಟೆಂಬರ್ ವರೆಗಿನ ಸಾಲದ ಮೇಲಿನ 6 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಕಂಪನಿಗಳ ತೆರಿಗೆ ಮರುಪಾವತಿಗೆ ಸಮಯ ವಿಸ್ತರಿಸಬೇಕು ಸ್ಥಳೀಯ ಸಂಸ್ಥೆಗಳ 6 ತಿಂಗಳ ಆಸ್ತಿ ತೆರಿಗೆ ಸೇರಿದಂತೆ ಹಲವು ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಂಎಸ್ಎಂಇ ಪುನಶ್ಚೇತನಕ್ಕೆ ಸಲಹೆ ನೀಡಿ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದ ದೇಶಪಾಂಡೆ
ಬೆಂಗಳೂರು:ಎಂಎಸ್ಎಂಇ ಪುನಶ್ಚೇತನಕ್ಕೆ ಹಲವು ಸಲಹೆ ನೀಡಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಆರ್.ವಿ.ದೇಶಪಾಂಡೆ ಈ ಲಾ್ಕ್ಡೌನ್ ಅವಧಿಯನ್ನು ಜೀರೋ ಅವಧಿ ಎಂದು ಪರಿಗಣಿಸಲು ಮನವಿ ಮಾಡಿದ್ದಾರೆ.