ಬೆಂಗಳೂರು: ನಬಾರ್ಡ್ ಗ್ರಾಮೀಣ ಹಬ್ಬವನ್ನು ನಗರದಲ್ಲಿ ಮಾರ್ಚ್ 10ರಿಂದ 14ರವರೆಗೆ ಆಯೋಜಿಸಲಾಗುತ್ತದೆ ಎಂದು ನಬಾರ್ಡ್ ಮುಖ್ಯ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಬಾರ್ಡ್ ಗ್ರಾಮೀಣ ಹಬ್ಬವನ್ನು ಮಂತ್ರಿ ಮಾಲ್‌ನಲ್ಲಿ ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ನೇಕಾರರು, ಸ್ವಸಹಾಯ ಸಂಘಗಳು ಗ್ರಾಮೀಣ ಭಾಗದ ಕುಶಲಕರ್ಮಿಗಳು, ನೇಕಾರರು, ರೈತರು ಮತ್ತು ಬುಡಕಟ್ಟು ಜನಾಂಗದವರು ಆಗಮಿಸಿ ಐದು ದಿನಗಳವರೆಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಬಹುದು ಎಂದರು.