ಬೆಂಗಳೂರು :ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದ್ದರಿಂದ ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.
ಭೋಜನ ವಿರಾಮದ ನಂತರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಸಿಡಿ ಪ್ರಕರಣದ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಸಿ ಎಂ ಇಬ್ರಾಹಿಂ, ಸಿಡಿಯಲ್ಲಿ ಏನು ಕಂಟೆಂಟ್ ಇದೆ ಎಂದು ಹೇಳಬೇಕು, ಬಾಂಬೆ ಡೀಲ್‌ಗೆ ಒಳಪಟ್ಟಿತ್ತಾ, ಪ್ಯಾಕೇಜ್ ಇತ್ತಾ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದರು.
ಅಷ್ಟೇ ಅಲ್ಲ, ಆರು ಜನ ಮಂಚ ಮುರಿದು ಎನ್ನುವ ಪದ ಪ್ರಯೋಗಿಸಿದರು. ಇದಕ್ಕೆ ಬಿಜೆಪಿಯ ಭಾರತಿ ಶೆಟ್ಟಿ ಮತ್ತು ತೇಜಸ್ವಿನಿಗೌಡ ಆಕ್ಷೇಪಿಸಿದರು. ಇಂತಹ ಹೇಳಿಕೆ ಕೇಳಲು ಸಾಧ್ಯವಿಲ್ಲ, ನಾವು ಸಭಾತ್ಯಾಗ ಮಾಡುತ್ತೇವೆ ಎಂದರು.