ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಶಾಸಕರ ಹೆಸರಿನಲ್ಲಿದ್ದ ಕಾರಿಗೆ ಆರ್ಟಿಒ ಅಧಿಕಾರಿಗಳು ದಂಡ ವಿಧಿಸಿದ ಘಟನೆ ನಡೆದಿದೆ. ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ದೊಡ್ಡದಾಗಿ ಬರೆಯಲಾಗಿತ್ತು. ಆರ್ಟಿಒ ಅಧಿಕಾರಿಗಳು ವಿಧಾನಸೌಧದ ಆವರಣದೊಳಗೆ ಈ ಕಾರನ್ನು ಚೇಸ್ ಮಾಡಿಕೊಂಡು ಬಂದು ನೋಟಿಸ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಶಾಸಕರ ಕಾರಿಗೆ ದಂಡ ವಿಧಿಸಿದ ಆರ್ಟಿಒ ಅಧಿಕಾರಿಗಳು! - RTO officials issued notice to a MLA car in Vidhana Soudha
ವಿಧಾನಸೌಧ ಆವರಣದಲ್ಲಿ ಶಾಸಕರ ಹೆಸರಿನಲ್ಲಿದ್ದ ಕಾರಿಗೆ ಆರ್ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಹೆಸರಿನಲ್ಲಿರುವ ಕಾರು ಇದಾಗಿದ್ದು, ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ಬರೆದಿತ್ತು. ನಂಬರ್ ಪ್ಲೇಟ್ ಡಿಫೆಕ್ಟ್ ಎಂದು ಕಾರು ಚಾಲಕನಿಗೆ ನೋಟಿಸ್ ನೀಡಲಾಗಿದೆ.
![ವಿಧಾನಸೌಧದಲ್ಲಿ ಶಾಸಕರ ಕಾರಿಗೆ ದಂಡ ವಿಧಿಸಿದ ಆರ್ಟಿಒ ಅಧಿಕಾರಿಗಳು! rto](https://etvbharatimages.akamaized.net/etvbharat/prod-images/768-512-14952019-thumbnail-3x2-lek.jpg)
ಶಾಸಕರ ಕಾರಿಗೆ ದಂಡ ವಿಧಿಸಿದ ಆರ್ಟಿಒ ಅಧಿಕಾರಿಗಳು
ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಹೆಸರಿನಲ್ಲಿರುವ ಇನ್ನೋವಾ ಕಾರು ವಿಧಾನಸೌಧ ಆವರಣದಲ್ಲಿ ಓಡಾಡುತ್ತಿತ್ತು. ಐಷಾರಾಮಿ ಕಾರಿನಲ್ಲಿ ಶಾಸಕರ ಹೆಸರಿನಲ್ಲಿ ಸ್ಟಿಕ್ಕರ್ ಹಾಕಿ ಒಬ್ಬನೇ ಓಡಾಡುತ್ತಿದ್ದ ಚಾಲಕನಿಗೆ ಆರ್ಟಿಒ ಅಧಿಕಾರಿಗಳು ನಂಬರ್ ಪ್ಲೇಟ್ ಡಿಫೆಕ್ಟ್ ಎಂದು ನೋಟಿಸ್ ನೀಡಿದ್ದಾರೆ.
ಶಾಸಕರ ಕಾರಿಗೆ ದಂಡ ವಿಧಿಸಿದ ಆರ್ಟಿಒ ಅಧಿಕಾರಿಗಳು
ಇದನ್ನೂ ಓದಿ:ಸಿಎನ್ಜಿ ದರದಲ್ಲಿ ಮತ್ತೆ 2.50 ರೂ. ಏರಿಕೆ.. 6 ದಿನದಲ್ಲಿ ಪ್ರತಿ ಕೆಜಿಗೆ 9.10 ರೂ. ಹೆಚ್ಚಳ!
TAGGED:
ಆರ್ಟಿಒ ಅಧಿಕಾರಿಗಳು