ಬೆಂಗಳೂರು:ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇತ್ತ ಪರ್ಯಾಯವಾಗಿ ಖಾಸಗಿ ಬಸ್ಸುಗಳನ್ನ ರಸ್ತೆಗಿಳಿಸಲಾಗಿದೆ. ಆದರೆ ಖಾಸಗಿ ಬಸ್ಸುಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆರ್ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರು.
ಖಾಸಗಿ ಬಸ್ಗಳಲ್ಲಿ ದರ ಸುಲಿಗೆ ಆರೋಪ : ಕಾರ್ಯಾಚರಣೆಗಿಳಿದ ಆರ್ಟಿಒ ಅಧಿಕಾರಿಗಳು - ಸಾರಿಗೆ ನೌಕರರ ಮುಷ್ಕರ
ಖಾಸಗಿ ಬಸ್ಸುಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆರ್ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರು.
ಕಾರ್ಯಚರಣೆಗಳಿದ ಆರ್ಟಿಓ ಅಧಿಕಾರಿಗಳು
ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಮಫ್ತಿಯಲ್ಲಿ ಬಂದು ಖಾಸಗಿ ಬಸ್ ಗಳಲ್ಲಿ ಪರಿಶೀಲನೆ ನಡೆಸಿದರು. ಪ್ರಯಾಣಿಕರಿಂದ ಟಿಕೆಟ್ ದರ ಬಗ್ಗೆ ಮಾಹಿತಿ ಪಡೆದ ನರೇಂದ್ರ ಹೋಳ್ಕರ್, ಖಾಸಗಿ ಬಸ್‌ಗಳ ದುಪ್ಪಟ್ಟು ಸುಲಿಗೆ ಬಗ್ಗೆ ವಿಚಾರಣೆ ಮಾಡಿದರು. ಹೆಚ್ಚು ದರ ಪಡೆಯದಂತೆ ಖಾಸಗಿ ಬಸ್ ನವರಿಗೂ ಸೂಚನೆ ನೀಡಿದರು.