ಬೆಂಗಳೂರು: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ವಾಹನ ತಡೆದ ಆರ್ಟಿಒ ಅಧಿಕಾರಿಯೊಬ್ಬರು, ಕೇವಲ ಫೈನ್ ಹಾಕಿ ಬಿಟ್ಟು ಕಳಿಸುವ ಬದಲು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎನ್ನುವುದನ್ನು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ನೆಲಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿಆರ್ಟಿಒ ಅಧಿಕಾರಿ ಧನ್ವಂತರಿ ಒಡೆಯರ್, ಸಂಚಾರಿ ನಿಯಮಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸೋದು ಕಾನೂನು ಬಾಹಿರ. ಅದರೆ ಹಣ ಉಳಿಸುವ ಕಾರಣಕ್ಕೆ ಸರಕು ಸಾಗಣಿಕೆ ವಾಹನಗಳಲ್ಲಿಯೇ ಕೂಲಿಯಾಳುಗಳನ್ನು ಸಾಗಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಈ ವಾಹನಗಳಲ್ಲಿ ಜನರ ಪ್ರಯಾಣವನ್ನು ಸುಪ್ರೀಂ ಕೋರ್ಟ್ ಆದೇಶದ ಮೂಲಕ ನಿಷೇಧಿಸಿದೆ ಎಂದು ಹೇಳಿದರು.