ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪ್ರಣಾಳಿಕೆ ವಿನಾಶ ಕಾಲೇ ವಿಪರೀತ ಬುದ್ದಿಯಂತಿದೆ.. ತಾಕತ್ತಿದ್ದರೆ ಬಜರಂಗದಳ ನಿಷೇಧಿಸಿ ನೋಡಿ:ಕರಂದ್ಲಾಜೆ ಸವಾಲ್​ - ತಾಕತ್ತಿದ್ದರೆ ಬಜರಂಗದಳ ನಿಷೇಧಿಸಿ

ಪಿಎಫ್ಐ ಅನ್ನು ಭಜರಂಗದಳದ ಜೊತೆ ಹೋಲಿಕೆ ಮಾಡುತ್ತೀರಾ? ಬಜರಂಗದಳ ಬ್ಯಾನ್ ಮಾಡಿ ನಿಮ್ಮ ಶಕ್ತಿ ತೋರಿಸಿ ಆಗ ದೇಶಾದ್ಯಂತ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

Shobha Karandlaje spoke at a press conference.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : May 2, 2023, 1:05 PM IST

Updated : May 2, 2023, 1:57 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ಆರ್‌ಎಸ್ಎಸ್​​​ನ ಒಂದು ಭಾಗ ಬಿಜೆಪಿ, ಆರ್‌ಎಸ್ಎಸ್ ನ ಯುವಕರ ದಳ ಬಜರಂಗದಳ, ಬಜರಂಗ ದಳ ದೇಶಸೇವೆ ಮಾಡುವ ಒಂದು ದಳ. ಇವತ್ತು ಬಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡಿದೆ. ಪಿಎಫ್ಐ ಜತೆ ದೇಶಪ್ರೇಮಿ ಬಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಬಜರಂಗದಳ ನಿಷೇಧ ಮಾಡಿ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ನೇರವಾಗಿ ಕಾಂಗ್ರೆಸ್​ಗೆ​ ಸವಾಲು ಹಾಕಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಬಜರಂಗದಳದ ಕಾರ್ಯಕರ್ತೆ, ತಾಕತ್ ಇದ್ದರೆ ನನ್ನನ್ನೂ ಅರೆಸ್ಟ್ ಮಾಡಿ ನೋಡೋಣ. ವಿನಾಶಕಾಲೇ ವಿಪರೀತ ಬುದ್ಧಿ ಅನ್ನುವಂತೆ ಕಾಂಗ್ರೆಸ್ ನಡೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ವಿನಾಶ ಕಾಲ‌ ಸಮೀಪಿಸಿದೆ. ಪಿಎಫ್ಐ ನಿಷೇಧ ಈಗಾಗಲೇ ಕೇಂದ್ರ ಸರ್ಕಾರ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ಐ ನಿಷೇಧ ಮಾಡುತ್ತೇವೆ, ಜತೆಗೆ ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿದಾರೆ. ಕಾಂಗ್ರೆಸ್‌ನವರ ಟಾರ್ಗೆಟ್ ಇರೋದು ಪಿಎಫ್ಐ ಅಲ್ಲ, ಅವರ ಟಾರ್ಗೆಟ್ ಬಜರಂಗ ದಳ. ನೀವು ಪಿಎಫ್ಐ ಅನ್ನು ಬಜರಂಗದಳದ ಜೊತೆ ಹೋಲಿಕೆ ಮಾಡ್ತೀರಾ? ಬಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ ಆಗ ನಾವೂ ದೇಶಾದ್ಯಂತ ನಮ್ಮ ಶಕ್ತಿ ತೋರಿಸುತ್ತೇವೆ ಎಂದರು.

ತಾಕತ್​ ಇದ್ದರೆ ಮುಸಲ್ಮಾನ್​​ ವೋಟುಗಳಿಂದಷ್ಟೇ ಗೆದ್ದು ಬನ್ನಿ: ಕರಂದ್ಲಾಜೆ:ಕಾಂಗ್ರೆಸ್ ಹಿಂದೂಗಳು, ರಾಮಮಂದಿರ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಗೆ ಪದೇ ಪದೆ ಅವಮಾನ ಮಾಡುತ್ತಿದೆ. ನೀವು ತಾಕತ್ ಇದ್ದರೆ ಮುಸಲ್ಮಾನರ ಮತಗಳಿಂದಷ್ಟೇ ಗೆದ್ದು ಬನ್ನಿ ನೋಡೋಣ, ಇದು ಮುಸಲ್ಮಾನರ ಓಲೈಕೆಗೆ ಕೊಟ್ಟಿರುವ ಪ್ರಣಾಳಿಕೆ, ಬಜರಂಗದಳದ ನಿಷೇಧ ಹಿಂದೂ ಸಮಾಜ ಒಪ್ಪಲ್ಲ ಎಂದು ಹರಿಹಾಯ್ದರು. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ, ಅದು ಇವತ್ತು ಮತ್ತೆ ಸಾಬೀತಾಗಿದೆ. ನಾನೂ ಬಜರಂಗದಳದ ಕಾರ್ಯಕರ್ತೆ ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎನ್ನುವ ಮೂಲಕ ಕಾಂಗ್ರೆಸ್​ಗೆ ಶೋಭಾ ನೇರ ಸವಾಲು ಎಸೆದು ಆಕ್ರೋಶ ಭರಿತವಾಗಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇವತ್ತು ಪಿಎಫ್‌ಐ ಜಮಾತೆ ಇಸ್ಲಾಂ ಹಾಗೂ ಐಸಿಸ್ ಜೊತೆ ಸಂಬಂಧ ಇಟ್ಟುಕೊಂಡಿದೆ. ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿದಾಗ ಸಿಕ್ಕಿಬಿದ್ದರು. ಅವರೆಲ್ಲರನ್ನೂ ಎನ್ಐಎ ವಿಚಾರಣೆ ನಡೆಸುತ್ತಿದೆ,ಯಾರೆಲ್ಲಾ ಬಾಂಬ್ ಬ್ಲಾಸ್ಟ್ ನಲ್ಲಿ ಸಿಕ್ಕಿಬಿದ್ದರು ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ದೇಶದಲ್ಲಿ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅದಕ್ಕೆ‌ ಕಾರಣ ಸಿದ್ದರಾಮಯ್ಯ, ಮತ ಬ್ಯಾಂಕ್ ಮಾಡಿಕೊಳ್ಳಲು ಹೊರಟಿದ್ದೀರಿ. ಈ ಎಲ್ಲ ಕೃತ್ಯಗಳಿಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕಾರಣ. ಕರ್ನಾಟಕವನ್ನು ಮಣಪ್ಪುರಂ ಮಾಡಲು ಬಿಡೋದಿಲ್ಲ. ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು ಎಂದರು.
ಬ್ಯಾನ್​ ಮಾಡಿ ನೋಡಿ- ಶೋಭಾ:ನಿಮಗೆ ತಾಕತ್ ಇದ್ರೆ ಬಜರಂಗದಳ ಬ್ಯಾನ್ ಮಾಡಿ ತೋರಿಸಿ. ಬಜರಂಗದಳ ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ. ದೇಶ ವಿರೋಧಿ ಸಂಘಟನೆ ಅಲ್ಲ.ನೀವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲಿಡೋದಾಗಿ ಹೇಳಿದ್ದೀರಿ. ಗೋ‌ಹತ್ಯೆ ಕಾಯ್ದೆ ವಾಪಸ್ ಪಡೀತೀವಿ ಅಂತ ಹೇಳಿದ್ದೀರಿ. ಮತಾಂತರ ಕಾಯ್ದೆ ವಾಪಸ್ ಪಡೀತೀನಿ ಅಂತ ಹೇಳ್ತೀರಿ ಎಂದರು.

ತಾಯಿ ಎದೆ ಹಾಲು ಇಲ್ಲದಾಗ ಗೋ ಹಾಲನ್ನು ಕುಡೀತಿವಿ. ಆದರೆ ಗೋ ಹತ್ಯೆ ಕಾಯ್ದೆಯನ್ನೇ ತೆಗೀತೀವಿ ಅಂತ ಹೇಳುತ್ತೀರಿ.ಕೇವಲ ಮುಸ್ಲಿಂ ಓಟಲ್ಲಿ ಗೆದ್ದುಬರಲು ಕಾಂಗ್ರೆಸ್‌ಗೆ ತಾಕತ್ ಇದೆಯಾ.? ಈ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆ ಕೇವಲ ಒಂದು ಧರ್ಮದ ಓಲೈಕೆ ಮಾಡಲು ಮಾತ್ರ. ನೀವು ಅವರನ್ನೇ ಓಲೈಕೆ ಮಾಡಿ, ಹಿಂದೂಗಳ ವೋಟ್​​ ನಿಮಗೆ ಸಿಗೋದಿಲ್ಲ ಎಂದು ತಿಳಿಸಿದರು.

ಇದನ್ನೂಓದಿ:ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ: ಭಜರಂಗದಳ, PFI ನಿಷೇಧ, ಜನರಿಗೆ ಮತ್ತಷ್ಟು ಉಚಿತಗಳ ಭರವಸೆ

Last Updated : May 2, 2023, 1:57 PM IST

ABOUT THE AUTHOR

...view details