ಕರ್ನಾಟಕ

karnataka

ETV Bharat / state

ರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿ ಸಿಎಂ-ಆರ್​​ಎಸ್ಎಸ್ ಪ್ರಮುಖ್ ಮುಕುಂದ್ ಭೇಟಿ - CM in Bangalore

ರೇಸ್​​​ಕೋರ್ಸ್ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಅವರನ್ನು ಆರ್​ಎಸ್​ಎಸ್​ ಪ್ರಮುಖ್​ ಮುಕುಂದ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮುಕುಂದ್ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ.

ರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿ ಸಿಎಂ-ಆರ್​​ಎಸ್ಎಸ್ ಪ್ರಮುಖ್ ಮುಕುಂದ್ ಭೇಟಿ
RSS Pramukh Mukund meet CM in Bangalore

By

Published : Nov 7, 2021, 12:09 PM IST

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಹಾಗೂ ಆರ್​​ಎಸ್ಎಸ್ ಹಿರಿಯ ಪ್ರಮುಖ್ ಮುಕುಂದ್ ಭೇಟಿಯಾಗಿ ಚರ್ಚೆ ನಡೆಸಿದರು.

ರೇಸ್​​​ಕೋರ್ಸ್ ಸರ್ಕಾರಿ ನಿವಾಸದಲ್ಲಿ ಸಿಎಂರನ್ನು ಮುಕುಂದ್ ಭೇಟಿಯಾಗಿ ಚರ್ಚೆ ನಡೆಸಿದರು. ಸರ್ಕಾರಿ ನಿವಾಸದಲ್ಲೇ ಮುಕುಂದ್ ಜೊತೆ ಉಪಹಾರ ಸೇವನೆ ಮಾಡಿದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮುಕುಂದ್ ಜೊತೆ ಚರ್ಚೆ ನಡೆಸಿದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮುಕುಂದ್ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ. ಬಿಟ್​​ಕಾಯಿನ್ ವಿವಾದ ತೀವ್ರಗೊಳ್ಳುತ್ತಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನ ಸಿಎಂ ಹಾಗೂ ಮುಕುಂದ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹಿಂದೆ ಯಡಿಯೂರಪ್ಪ ನಾಯಕತ್ವ ಬದಲಾವಣೆ ವೇಳೆ ಸಂಘ ಪರಿವಾರದ ಪ್ರಮುಖ್ ಮುಕುಂದ್ ಪ್ರಮುಖ ಪಾತ್ರ ವಹಿಸಿದ್ದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರುಗಳ ಹೆಸರು ಕೇಳಿ ಬರುತ್ತಿದ್ದು, ಈ ವೇಳೆ ಮುಕುಂದ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಚರ್ಚೆ ವೇಳೆ ಬಿಟ್ ಕಾಯಿನ್ ಪ್ರಕರಣ, ಉಪಸಮರದ ಫಲಿತಾಂಶದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details