ಬೆಂಗಳೂರು :ಲಾಕ್ಡೌನ್ ಹಿನ್ನೆಲೆ ಬಡವರಿಗೆ ಊಟ ಹಂಚುವ ಸಂದರ್ಭದಲ್ಲಿ ಮಹಿಳೆ ಹಾಗೂ ಇತರರ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ: ತನಿಖೆ ಪ್ರಾರಂಭಿಸಿದ ಪೊಲೀಸರು - ಮಹಿಳೆ ಮೇಲೆ ಹಲ್ಲೆ ಆರೋಪ
ಕೊರೊನಾ ವೈರಸ್ ತಡೆ ನಿಟ್ಟಿನಲ್ಲಿ ದೇಶಾದ್ಯಂತ ಕರೆನೀಡಿರುವ ಲಾಕ್ಡೌನ್ ಹಿನ್ನೆಲೆ ಬಡವರಿಗೆ ಊಟ ಕೊಡುವ ಸಂದರ್ಭದಲ್ಲಿ ಮಹಿಳೆ ಹಾಗೂ ಇತರರ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ
ಅಮೃತಹಳ್ಳಿ ಬಳಿ ಇರುವ ದಾಸರಹಳ್ಳಿಯಲ್ಲಿ ಮಹಿಳೆ ಊಟ ಹಂಚುತ್ತಿದ್ದರು. ಆದರೆ, ಇದನ್ನು ತಪ್ಪಾಗಿ ಭಾವಿಸಿಕೊಂಡು ಸಂಘಟನೆಯ ಕೆಲವರು ಹಲ್ಲೆ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ಅಮೃತಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, ಮಹಿಳೆ ಮೇಲೆ ಹಲ್ಲೆ ನಡೆಸಿರೋದು ತಪ್ಪು. ಈ ಬಗ್ಗೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತೆ, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
Last Updated : Apr 7, 2020, 12:32 PM IST