ಕರ್ನಾಟಕ

karnataka

ETV Bharat / state

ಮೀಸಲಾತಿ ಗೊಂದಲ ನಿರ್ಮಾಣಕ್ಕೆ ಆರ್​ಎಸ್​ಎಸ್​ ಕಾರಣ: ಸಿದ್ಧರಾಮಯ್ಯ ಕಿಡಿ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೀಸಲಾತಿ ಕೊಡಲು ಸಮಗ್ರ ಮಾಹಿತಿಯ ಅಗತ್ಯವಿದೆ. ಹೀಗಾಗಿ, ಶೈಕ್ಷಣಿಕ, ಆರ್ಥಿಕ ಸಮಗ್ರ ಸರ್ವೇ ಆಗಬೇಕು ಆಗ ಯಾವ ಸಮುದಾಯ ಎಷ್ಟಿದೆ ಎಂದು ತಿಳಿಯುತ್ತದೆ.‌ ದೇಶದಲ್ಲಿ ಸಮಪಾಲು ಸಮಬಾಳು ಎಂಬ ವಾಕ್ಯ ಭಾಷಣಕ್ಕೆ ಅಷ್ಟೇ ಮೀಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರ್ನಾಟಕ‌‌ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ
ಸಿದ್ದರಾಮಯ್ಯ

By

Published : Mar 18, 2021, 6:39 AM IST

ಬೆಂಗಳೂರು‌: ನಗರದ ಮೌರ್ಯ ವೃತ್ತದ ಬಳಿ‌ ಕರ್ನಾಟಕ‌‌ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಒಂದು ದಿನದ ಮಟ್ಟಿಕಗೆ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಸಿ ಸಿಎಂ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗಿ, ಬಜೆಟ್ ಮಂಡಿಸುವಾಗ ಎಲ್ಲ ಲೇಖಕರನ್ನು ಚರ್ಚೆಗೆ ಕರೆಯುತ್ತಿದೆ. ಹಿಂದುಳಿದ ಜಾತಿಗಳ ಒಕ್ಕೂಟದವರನ್ನೂ ಕರೆಯುತ್ತಿದ್ದೆ. ಅವರು ಹೇಳಿದ ಒತ್ತಾಯಗಳನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡ್ತಿದೆ. ಹಣ ಕೂಡ ಬಿಡುಗಡೆ ಮಾಡ್ತಿದ್ದೆ. ನನ್ನ ಅಧಿಕಾರದಲ್ಲಿ 14 ನಿಗಮಗಳಿಗೆ 500 ಕೋಟಿ ಬಿಡುಗಡೆ ಮಾಡಿದ್ದೆ. ಆದ್ರೆ ಇವತ್ತು ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಜಾತಿಗಳಿಗೆ ದ್ರೋಹ ಮಾಡಲಾಗಿದೆ ಎಂದರು.

ರ್ನಾಟಕ‌‌ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

ಮೀಸಲಾತಿ ಕೊಡಲು ಸಮಗ್ರ ಮಾಹಿತಿಯ ಅಗತ್ಯವಿದೆ. ಹೀಗಾಗಿ, ಶೈಕ್ಷಣಿಕ, ಆರ್ಥಿಕ ಸಮಗ್ರ ಸರ್ವೇ ಆಗಬೇಕು. ಆಗ ಯಾವ ಸಮುದಾಯ ಎಷ್ಟಿದೆ ಎಂದು ತಿಳಿಯುತ್ತದೆ.‌ ದೇಶದಲ್ಲಿ ಸಮಪಾಲು ಸಮಬಾಳು ಎಂಬ ವಾಕ್ಯ ಭಾಷಣಕ್ಕೆ ಅಷ್ಟೇ ಮೀಸಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಜಾತಿ ಗಣತಿ ಪೂರ್ಣ ಆಯ್ತು. ಕುಮಾರಸ್ವಾಮಿ ಎದುರಿಸಿ ಜಾತಿ ಗಣತಿ ತೆಗೆದುಕೊಳ್ಳಲಿಲ್ಲ. ಈಗ ಬಿಜೆಪಿಯೂ ಜಾತಿ ಗಣತಿಯ ವಿವರ ತಗೆದುಕೊಳ್ಳುತ್ತಿಲ್ಲ. ಯಾರ್ಯಾರು ಎಷ್ಟೆಷ್ಟು ಇದ್ದಾರೆ ಎಂದು ತಿಳಿಯಲಿದೆ, ಅದಕ್ಕಾಗಿ ಜಾತಿ ಗಣತಿ ತೆಗೆದುಕೊಳ್ತಿಲ್ಲ. ಈ ಬಗ್ಗೆ ತಾಲೂಕು ಮಟ್ಟದಿಂದ ರಾಜ್ಯವ್ಯಾಪಿ ಹೋರಾಟ ಆಗಬೇಕು. ನಾನು ನಿಮ್ಮ ಜೊತೆ ಇರುತ್ತೇನೆ ಹೋರಾಟ ಮಾಡೋಣ ಎಂದರು.

ಇನ್ನು ಮೀಸಲಾತಿ ಮತ್ತು ರಾಜಕೀಯ ಗೊಂದಲಕ್ಕೆ ಆರ್​ಎಸ್​ಎಸ್​ ಕಾರಣವಾಗಿದೆ. ಇವರು ಯಾವಾಗ ತಾನೇ ಮೀಸಲಾತಿ ಪರ ಇದ್ರು? ಮೀಸಲಾತಿಗಾಗಿ ಜನರಲ್ಲಿ ಗೊಂದಲ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ಈ ಧರಣಿಯಲ್ಲಿ ಮಾಜಿ ಸಚಿವ ಹೆಚ್.ಎಂ ರೇವಣ್ಣ, ಭೈರತಿ ಸುರೇಶ್‌ ಮತ್ತು ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯದ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ಭಾಗವಹಿಸಿದರು.

ABOUT THE AUTHOR

...view details