ಕರ್ನಾಟಕ

karnataka

ETV Bharat / state

ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿದ ಆರ್‌ಎಸ್‌ಎಸ್ ಕಾರ್ಯಕಾರಿ ಮಂಡಳಿ - ನಟ ಪುನೀತ್​ ರಾಜ್​ ಕುಮಾರ್ ನಿಧನ

ನಟ ಪುನೀತ್​ ರಾಜ್​ ಕುಮಾರ್ ನಿಧನಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ಆರ್​ಎಸ್​ಎಸ್​​​ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ತೀವ್ರ ಸಂತಾಪ ಸೂಚಿಸಿದೆ..

RSS executive board gave condolences to actor puneeth death
ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿದ ಆರ್‌ಎಸ್‌ಎಸ್ ಕಾರ್ಯಕಾರಿ ಮಂಡಳಿ

By

Published : Oct 29, 2021, 4:28 PM IST

ಬೆಂಗಳೂರು :ಸ್ಯಾಂಡಲ್​ವುಡ್​​ ನಟ ಪುನೀತ್ ರಾಜ್​ ಕುಮಾರ್ ನಿಧನಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ಆರ್​ಎಸ್​ಎಸ್​​​ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

ಪುನೀತ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಆರ್​ಎಸ್​ಎಸ್​​ ಪ್ರಾರ್ಥಿಸುತ್ತದೆ ಎಂದು ಆರ್‌ಎಸ್‌ಎಸ್ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಮೂರು ದಿನಗಳ ಸಭೆಯು ಧಾರವಾಡದಲ್ಲಿ ಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ನಡೆಯುತ್ತಿದೆ. ಸಭೆ ವೇಳೆ ಪುನೀತ್ ನಿಧನದ ಸುದ್ದಿ ತಿಳಿದು ಸಂತಾಪ ಸೂಚಿಸಲಾಯಿತು.

ಇದನ್ನೂ ಓದಿ: LIVE UPDATES: ನಟ ಪುನೀತ್‌ ರಾಜ್‌ಕುಮಾರ್‌ ಇನ್ನಿಲ್ಲ...ಗಣ್ಯರ ಸಂತಾಪ

ABOUT THE AUTHOR

...view details