ಆನೇಕಲ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮಡಿದದವರ ಕುಟುಂಬಗಳಿಗೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಹಾಗು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವನಿಯಂಬಾಡಿ ತಾಲ್ಲೂಕು ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ತಂಡದೊಂಡಿಗೆ ತಮಿಳುನಾಡಿಗೆ ತೆರಳಿ ಕುಟುಂಬದ ಮುಖ್ಯಸ್ಥರಿಗೆ ತಲಾ 5 ರೂಪಾಯಿ ಲಕ್ಷ ಚೆಕ್ ವಿತರಿಸಿದ್ದಾರೆ. ಅದರಂತೆ ಈಗಾಗಲೇ 13 ಕುಟುಂಬಗಳಿಗೆ ಚೆಕ್ ವಿತರಿಸಿದ್ದು, ಇನ್ನೂ ಮೂರು ಚೆಕ್ ವಿತರಿಸಬೇಕಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅರೂರು ಗ್ರಾಮದ ಮೃತರಾದ ವೇದಪ್ಪನ್, ಆದಿಕೇಶನ್, ವಿಜಯ ರಾಘವನ್, ಆಕಾಶ್ ರಾಜ್, ಗಿರಿ, ಇಳಂಬರಕಿ ಮತ್ತು ಮುನಿವೇಲ್ (ಸಚಿನ್) ವೆಲ್ಲಕೊಟೈ ಗ್ರಾಮದ ನಿತೀಶ್, ಸಂತೋಷ್ ಮತ್ತು ದಿನೇಶ್, ನೀಪದುರೈ ಗ್ರಾಮದ ರಾಜೇಶ್, ಹೊಸೂರು ಗ್ರಾಮಾಂತರದ ಆಂತೋಣಿ ಪಾಲ್ ರಾಜ್ ಕುಟುಂಬಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ವಿತರಿಸಲಾಗಿದೆ ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ.