ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 61 ಯೋಜನೆಯ 3,829 ಕೋಟಿ ರೂ. ಬಂಡವಾಳ ಹೂಡಿಕೆ, 19,510 ಉದ್ಯೋಗ ಸೃಷ್ಟಿ: ನಿರಾಣಿ - ರಾಜ್ಯದಲ್ಲಿ 19510 ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ 3,829.46 ಕೋಟಿ ರೂ.ಗಳ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸುಮಾರು 19,150 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

rs-3829-crore-of-investment-from-61-schemes-in-karnataka-says-minister-murugesh-nirani
ರಾಜ್ಯದಲ್ಲಿ 61 ಯೋಜನೆಯ 3,829 ಕೋಟಿ ರೂ. ಬಂಡವಾಳ ಹೂಡಿಕೆ, 19,510 ಉದ್ಯೋಗ ಸೃಷ್ಟಿ: ನಿರಾಣಿ

By

Published : Jul 29, 2022, 8:42 PM IST

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, 3,829.46 ಕೋಟಿ ರೂ.ಗಳ ಮೊತ್ತದ ಬಂಡವಾಳ ಹೂಡಿಕೆ ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.

ನಗರದ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಇಂದು ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಇಷ್ಟೊಂದು ಮೊತ್ತದ ಹೊಡಿಕೆಯಿಂದ ರಾಜ್ಯದಲ್ಲಿ ಸುಮಾರು 19,150 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.

50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು 2,979.35 ಕೋಟಿ ಹೂಡಿಕೆಯಾಗಿ 16,158 ಉದ್ಯೋಗ ಸೃಜನೆಯಾಗಲಿವೆ. ಇದೇ ವೇಳೆ, 15 ಕೋಟೆಯಿಂದ 50 ಕೋಟಿ ಒಳಗಿನ 42 ಯೋಜನೆಗೆ ಹಸಿರು ನಿಶಾನೆ ನೀಡಲಾಗಿದೆ. 774.51 ಕೋಟಿ ಹೂಡಿಕೆಯೊಂದಿಗೆ 3,352 ಉದ್ಯೋಗ ಲಭಿಸಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು 6 ಯೋಜನೆಗಳಿಂದ 75.60 ಕೋಟಿ ಹೂಡಿಕೆಯಾಗಲಿದೆ. ಎಂದು ನಿರಾಣಿ ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದು ಎಲ್ಲ ‌ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸುತ್ತಿದೆ. ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಮುನ್ನುಡಿ ಬರೆಯಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಎಡಿಬಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅನುಮೋದನೆ ನೀಡಿರುವ ಯೋಜನೆಗಳು

  • ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್​​ - 445 ಕೋಟಿ ರೂ. ಹೂಡಿಕೆ, 1,198 ಉದ್ಯೋಗ ಸೃಷ್ಟಿ
  • ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್​ಎಲ್​ಪಿ - 397 ಕೋಟಿ ರೂ. ಹೂಡಿಕೆ, 797 ಉದ್ಯೋಗ
  • ಸೀತರಾಮಂ ಇಸ್ಟಾಟ್ ಪ್ರೈ.ಲಿ - 376 ಕೋಟಿ ರೂ. ಹೂಡಿಕೆ, 400 ಉದ್ಯೋಗ
  • ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ.ಲಿ - 340 ಕೋಟಿ ರೂ. ಹೂಡಿಕೆ, 310 ಉದ್ಯೋಗ
  • ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ. - 185 ಕೋಟಿ ರೂ. ಹೂಡಿಕೆ, 170 ಉದ್ಯೋಗ
  • ನಹಾರಾಸ್ ಇಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ. - 120 ಕೋಟಿ ರೂ. ಹೂಡಿಕೆ, 353 ಉದ್ಯೋಗ
  • ಶ್ರೀಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಮಾಗೂರ್ - 112 ಕೋಟಿ ರೂ. ಹೂಡಿಕೆ, 80 ಉದ್ಯೋಗ
  • ಲೂಜಾನ್ ಫಾರ್ಮಾ ಪ್ರೈ‌.ಲಿ. - 97.50 ಕೋಟಿ ರೂ. ಹೂಡಿಕೆ, 246 ಉದ್ಯೋಗ
  • ಎನ್​ಎಸ್​ಪಿ ಡಿಸ್ಟಿಲರಿ ಪ್ರೈ.ಲಿ. - 64.64 ಕೋಟಿ ರೂ. ಹೂಡಿಕೆ, 116 ಉದ್ಯೋಗ
  • ಸ್ಟ್ರೀಂಗ್ ಬಯೋ ಪ್ರೈ.ಲಿ. - 75 ಕೋಟಿ ರೂ. ಹೂಡಿಕೆ, 48 ಉದ್ಯೋಗ
  • ಋಷಿಲ್ ಡೆಕೋರ್ ಲಿ. - 72.76 ಕೋಟಿ ರೂ. ಹೂಡಿಕೆ, 310 ಉದ್ಯೋಗ

ABOUT THE AUTHOR

...view details