ಬೆಂಗಳೂರು :ನಾಲ್ಕನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 165 ಕೋಟಿ ರೂ. ಮೌಲ್ಯದ ಮದ್ಯ ಬಿಕರಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಒಟ್ಟು 635 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಇಂದು 152 ಕೋಟಿ ರೂ. ಮೌಲ್ಯದ 27.56 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 13 ಕೋಟಿ ರೂ. ಮೌಲ್ಯದ 5.93 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಲಾಕ್‌ಡೌನ್ ಮಧ್ಯೆ ಕಂಡಲ್ಲಿ 'ಗುಂಡು': ಇವತ್ತು 165 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ - liquor sold in State
ಮೂರು ದಿನಗಳಿಂದ ಬಾರ್ಗಳ ಮುಂದೆ ಇದ್ದ ಕ್ಯೂ ಅಷ್ಟಾಗಿ ಇಂದು ಕಂಡುಬಂದಿಲ್ಲವಾದರೂ ಮದ್ಯ ಮಾರಾಟ ಮಾತ್ರ ಜೋರಾಗಿದೆ.
ಸಂಗ್ರಹ ಚಿತ್ರ
ರಾಜ್ಯ ಸರ್ಕಾರ ಮದ್ಯದ ಮೇಲೆ ಶೇ. 17 ರಷ್ಟು ತೆರಿಗೆ ಹೆಚ್ಚಳ ಮಾಡಿದ್ದು, ಹೊಸ ದರ ಇಂದಿನಿಂದ ಜಾರಿಗೆ ಬಂದಿದೆ. ಹಾಗಾಗಿ, ಇಂದು ಮದ್ಯ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಲಾಗಿದೆ. ಇನ್ನು ಮೂರು ದಿನಗಳಿಂದ ಬಾರ್ಗಳ ಬಳಿ ಇದ್ದ ಕ್ಯೂ ಅಷ್ಟಾಗಿ ಇಂದು ಕಂಡುಬಂದಿಲ್ಲ.