ಬೆಂಗಳೂರು:ಆರ್.ಆರ್ ನಗರ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕೊರೊನಾ ಭೀತಿಯ ನಡುವೆಯೂ ಜನ ತಮ್ಮ ಹಕ್ಕು ಚಲಾಯಿಸಲು ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಆಗಮಿಸುತ್ತಿದ್ದಾರೆ.
ಜೆ ಪಿ ಪಾರ್ಕ್ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಿದ ವೋಟರ್ಸ್ ಏನಂತಾರೆ? - ಆರ್. ಆರ್ ನಗರದಲ್ಲಿ ಮೊದಲು ಮತದಾನ ಮಾಡಿದವರ ಅಭಿಪ್ರಾಯ
ಆರ್. ಆರ್ ನಗರ ಕ್ಷೇತ್ರದ ಜೆ.ಪಿ. ಪಾರ್ಕ್ ಮತಗಟ್ಟೆಯಲ್ಲಿ ಮೊದಲು ಮತ್ತು ಎರಡನೇಯವರಾಗಿ ಮತದಾನ ಮಾಡಿದವರು 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಮತದಾರರು
ಜೆ.ಪಿ. ಪಾರ್ಕ್ ಮತಗಟ್ಟೆಯಲ್ಲಿ ಲೋಕಾನಾಥ್ ಎಂಬವರು ಮೊದಲು ಮತದಾನ ಮಾಡಿದ್ದು, ಎರಡನೆಯವರಾಗಿ ಚಂದ್ರಶೇಖರ್ ಎಂಬುವರು ಹಕ್ಕು ಚಲಾಯಿಸಿದ್ದಾರೆ. ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲೂ ಕೋವಿಡ್ ಮಾರ್ಗಸೂಚಿಗಳ ಪಾಲಿನೆಯೊಂದಿಗೆ ಮತದಾನ ಮುಂದುವರಿದಿದೆ.