ಕರ್ನಾಟಕ

karnataka

By

Published : Oct 24, 2020, 6:24 PM IST

ETV Bharat / state

ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟು: ಮತದಾರರಿಗೆ ಡಿ.ಕೆ. ಶಿವಕುಮಾರ್ ಕರೆ

ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಮುನಿರತ್ನ ಕಥೆ ಗೋವಿಂದಾ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನುಡಿದಿದ್ದಾರೆ.

RR nagar By poll, RR nagar By poll 2020, RR nagar By poll 2020 news, DK Shivakumar spark on Yediyurappa, DK Shivakumar, DK Shivakumar news, DK Shivakumar campaign, DK Shivakumar campaign news, ಆರ್​ಆರ್​ ನಗರ ಉಪ ಚುನಾವಣೆ, ಆರ್​ಆರ್​ ನಗರ ಉಪ ಚುನಾವಣೆ 2020, ಆರ್​ಆರ್​ ನಗರ ಉಪ ಚುನಾವಣೆ 2020 ಸುದ್ದಿ, ಯಡಿಯೂರಪ್ಪ ವಿರುದ್ಧ ಡಿಕೆ ಶಿವಕುಮಾರ್​ ಕಿಡಿ,  ಡಿಕೆ ಶಿವಕುಮಾರ್ ಸುದ್ದಿ,  ಡಿಕೆ ಶಿವಕುಮಾರ್ ಪ್ರಚಾರ ಸುದ್ದಿ,
ಆರ್​ಆರ್​ ನಗರದಲ್ಲಿ ಡಿಕೆ ಶಿವಕುಮಾರ್​ ಪ್ರಚಾರ

ಬೆಂಗಳೂರು:ಈ ಚುನಾವಣೆ ಆದ ನಂತರ ಯಡಿಯೂರಪ್ಪ ಕೆಳಗಿಳಿಸುತ್ತಾರಂತೆ. ಯಡಿಯೂರಪ್ಪ ಹೋದರೆ ಮುನಿರತ್ನ ಕಥೆ ಗೋವಿಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಆರ್​ಆರ್​ ನಗರದಲ್ಲಿ ಡಿಕೆ ಶಿವಕುಮಾರ್​ ಪ್ರಚಾರ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್​ಗಳಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಹೆಚ್. ಅವರ ಪರ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್, ಕಳೆದ ಚುನಾವಣೆಯಲ್ಲಿ ನಿಮ್ಮ ಹಾಗೂ ನಮ್ಮ ಶ್ರಮವನ್ನು 50 ಕೋಟಿಗೆ ಮಾರಿಕೊಂಡಿದ್ದಾರೆ. ಮಾತೃ ಪಕ್ಷಕ್ಕೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಇದಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಅವಕಾಶ ಸಿಕ್ಕಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು.

ಬಿಜೆಪಿಯವರೇ ಇದೊಂದು ಬಾರಿ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ಬಾರಿ ಇವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇವರನ್ನು ಖಾಲಿ ಮಾಡಿಸಿ ಕ್ಷೇತ್ರಕ್ಕೆ ಮುಕ್ತಿ ತಂದುಕೊಡಬೇಕು. ಬಿಜೆಪಿ, ಕಾಂಗ್ರೆಸ್, ದಳದ ಕಾರ್ಯಕರ್ತರಿಗೆ ಮುಕ್ತಿ ಸಿಗಬೇಕು ಎಂದರೆ ಒಂದೇ ದಾರಿ ಅದು ಕುಸುಮಾ ಅವರ ಗೆಲುವು ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟು.

ಈ ಚುನಾವಣೆಗಾಗಿ 25 ಕೋಟಿ ಕೊಟ್ಟಿದ್ದಾರಂತೆ. ಅವರು ದುಡ್ಡು ಕೊಟ್ಟರೆ ಯಾರೊಬ್ಬರೂ ಬೇಡ ಅನ್ನ ಬೇಡಿ. ಎಲ್ಲರೂ ಹಣ ತೆಗೆದುಕೊಳ್ಳಿ. ಮುನಿರತ್ನನ ನೋಟು ಕುಸುಮಾಗೆ ವೋಟು. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದಿದ್ದಾರೆ ಡಿಕೆಶಿ.

ಎಲ್ಲ ಹೆಣ್ಣು ಮಕ್ಕಳು, ಯುವಕರು, ಎಲ್ಲ ವರ್ಗದವರು ಈ ಹೆಣ್ಣು ಮಗಳಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಈ ಕ್ಷೇತ್ರದಲ್ಲಿರುವ ಕೆಟ್ಟ ಹುಳುವನ್ನು ತೆಗಿಯಬೇಕು. ಬಿಜೆಪಿ ಅಭ್ಯರ್ಥಿ ಸೋತರೆ ಪೊಲೀಸಿನವರಿಗೂ ಖುಷಿಯಾಗುತ್ತದೆ. ಅವರು ಒಳಗೊಳಗೇ ಕಾಯುತ್ತಿದ್ದಾರೆ. ಯಾರಿಗಾದರೂ 15 ಲಕ್ಷ ಬಂತಾ?. ಚಾಲಕರು, ಸವಿತಾ ಸಮಾಜದವರಿಗೆ ಘೋಷಿಸಿದ 5 ಸಾವಿರ ಬಂತಾ?. ಯಾವುದೂ ಬಂದಿಲ್ಲ. ಹೀಗಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕುಸುಮಾ ಅವರನ್ನು ಗೆಲ್ಲಿಸಿ ಎಂದರು.

ABOUT THE AUTHOR

...view details