ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋ ಹಿನ್ನೆಲೆ ಮೆರವಣಿಗೆ ಸಾಗಿದ ಹಾದಿಯುದ್ದಕ್ಕೂ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡು ವಾಹನ ಸವಾರರಿಗೆ ಕಿರಿಕಿರಿಯಾದ ಘಟನೆ ಆರ್.ಆರ್.ನಗರದಲ್ಲಿ ಕಂಡುಬಂತು.
ಆರ್ಆರ್ ನಗರ ಉಪ ಕದನ: ದರ್ಶನ್ ರೋಡ್ ಶೋ ವೇಳೆ ಟ್ರಾಫಿಕ್ ಜಾಮ್ - ಆರ್ಆರ್ ನಗರ ಉಪ ಚುನಾವಣೆ 2020,
ಆರ್ ಆರ್ ನಗರದ ಉಪ ಕದನ ರಂಗೇರಿದೆ. ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಆರ್ ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ರೋಡ್ ಶೋ ನಡೆಸಿದರು. ಈ ವೇಳೆ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಯಶವಂತಪುರ ರೈಲು ನಿಲ್ದಾಣದಿಂದ ಜೆಪಿ ಪಾರ್ಕ್, ಜಾಲಹಳ್ಳಿ ಗ್ರಾಮ, ಹೆಚ್.ಎಂ.ಟಿ, ಪೀಣ್ಯ ಮತ್ತು ಗೊರಗುಂಟೆಪಾಳ್ಯ ವ್ಯಾಪ್ತಿಯ ಗಲ್ಲಿ-ಗಲ್ಲಿಗಳಲ್ಲಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ನಡೆಸಿದರು.
ಆರ್ ಆರ್ ನಗರದಲ್ಲಿ ತೆರೆದ ವಾಹನದಲ್ಲಿ ದರ್ಶನ್ ನೇತೃತ್ವದಲ್ಲಿ ಬೃಹತ್ ಪ್ರಚಾರ ಱಲಿ ನಡೆಸಲಾಯಿತು. ಈ ವೇಳೆ ಪ್ರಚಾರದಲ್ಲಿ ಸಾಗಿದ ಮಾರ್ಗಗಳು ಚಿಕ್ಕದಾಗಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿಯೂ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ವಾಹನ ಸವಾರರು ಹೈರಾಣಾಗಬೇಕಾಯಿತು. ಕೆಲಕಾಲ ಮಾತ್ರ ಟ್ರಾಫಿಕ್ ಸಮಸ್ಯೆ ಆಗಿದ್ದು, ಮೆರವಣಿಗೆ ಸಾಗುತ್ತಿದ್ದಂತೆ ಸಂಚಾರ ಸಮಸ್ಯೆ ಸರಿಪಡಿಸಲಾಯಿತು.