ಕರ್ನಾಟಕ

karnataka

ETV Bharat / state

ಆರ್​ಆರ್​ ನಗರ ಉಪ ಕದನ: ನಾಳೆ ಮುನಿರತ್ನ ಪರ ಅಖಾಡಕ್ಕಿಳಿಯಲಿದ್ದಾರೆ ‘ದುರ್ಯೋಧನ’! - ಆರ್​ಆರ್​ ನಗರ ಉಪ ಚುನಾವಣೆ 2020,

ಆರ್.ಆರ್. ನಗರ ಉಪ ಚುನಾವಣಾ ಪ್ರಚಾರಕ್ಕೆ ತಾರಾ ಮೆರುಗು ಬಂದಿದೆ. ನಿನ್ನೆ ನಟಿ ಖುಷ್ಬೂ ಅವರು ಬಿಜೆಪಿ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ್ದರು. ನಾಳೆ ಚಾಲೆಂಜಿಂಗ್‌ ಸ್ಟಾರ್ ಮತಬೇಟೆ ನಡೆಸಲಿದ್ದಾರೆ ಎಂದು ಮುನಿರತ್ನ ಹೇಳಿದರು.

actor Darshan to be campaigning, Tomorrow actor Darshan to be campaigning for Munirathna, Tomorrow actor Darshan to be campaigning, actor Darshan to be campaigning news, RR Nagar by poll 2020, RR Nagar by-poll 2020 news, ನಟ ದರ್ಶನ ಪ್ರಚಾರ, ಮುನಿರತ್ನ ಪರವಾಗಿ ನಟ ದರ್ಶನ್​ ಪ್ರಚಾರ, ನಾಳೆ ಮುನಿರತ್ನ ಪರವಾಗಿ ನಟ ದರ್ಶನ್​ ಪ್ರಚಾರ, ಆರ್​ಆರ್​ ನಗರ ಉಪ ಚುನಾವಣೆ 2020, ಆರ್​ಆರ್​ ನಗರ ಉಪ ಚುನಾವಣೆ 2020 ಸುದ್ದಿ,
ನಾಳೆ ನನ್ನ ಪರವಾಗಿ ದರ್ಶನ್​ ಪ್ರಚಾರ ನಡೆಸಿದ್ದಾರೆ ಎಂದು ಮುನಿರತ್ನ ಹೇಳಿದರು

By

Published : Oct 29, 2020, 12:04 PM IST

Updated : Oct 29, 2020, 12:14 PM IST

ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಳಿಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಾಳೆ ಇಡೀ ದಿನ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ನಾಳೆ ನನ್ನ ಪರವಾಗಿ ದರ್ಶನ್​ ಪ್ರಚಾರ ನಡೆಸಿದ್ದಾರೆ ಎಂದು ಮುನಿರತ್ನ ಹೇಳಿದರು

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅಭ್ಯರ್ಥಿ ಮುನಿರತ್ನ, ದರ್ಶನ್ ಪ್ರಚಾರಕ್ಕೆ ಆಗಮಿಸುತ್ತಿರುವ ಮಾಹಿತಿಯನ್ನು ನೀಡಿದ್ದಾರೆ. ಇಂದೇ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ನಾಳೆಗೆ ಮುಂದೂಡಿಕೆಯಾಗಿದೆ. ಈ ಸಂಬಂಧ ದರ್ಶನ್ ಜೊತೆ ಮಾತನಾಡಿದ್ದೇನೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಆರ್.ಆರ್. ನಗರ ಕ್ಷೇತ್ರದ ಎಲ್ಲಾ 9 ವಾರ್ಡ್​ಗಳಲ್ಲಿಯೂ ದರ್ಶನ್ ಮತ ಬೇಟೆ ನಡೆಸಲಿದ್ದಾರೆ ಎಂದರು.

ನಿನ್ನೆ ನಟಿ ಖುಷ್ಬೂ ಪ್ರಚಾರ ನಡೆಸಿದ್ದಾರೆ. ನಾಳೆ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಶೃತಿ, ತಾರಾ ಪ್ರಚಾರಕ್ಕೆ ಬರುತ್ತಾರೆ. ನಟ ಯಶ್ ಜೊತೆ ಮಾತನಾಡಿಲ್ಲ, ಮುಂದೆ ಯಾರೆಲ್ಲಾ ಬರಲಿದ್ದಾರೆ ಎನ್ನುವ ಮಾಹಿತಿಯನ್ನು ಮತ್ತೊಮ್ಮೆ ನೀಡುವುದಾಗಿ ಮುನಿರತ್ನ ತಿಳಿಸಿದರು.

ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ನಟರಾದ ದರ್ಶನ್ ಹಾಗು ಯಶ್ ಚುನಾವಣಾ ಪ್ರಚಾರ ನಡೆಸಿದ್ದರು. ಆ ಯಶಸ್ವಿ ಜೋಡೆತ್ತುಗಳನ್ನು ಪ್ರಚಾರಕ್ಕೆ ಕರೆತರುವ ಮಾಸ್ಟರ್ ಪ್ಲಾನ್ ಮಾಡಿರುವ ಮುನಿರತ್ನ ಮೊದಲ ಹಂತವಾಗಿ ನಟ ದರ್ಶನ್ ಅವರನ್ನು ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದ್ದಾರೆ.

Last Updated : Oct 29, 2020, 12:14 PM IST

ABOUT THE AUTHOR

...view details