ಬೆಂಗಳೂರು: ಬೆಳಗ್ಗೆ 11 ಗಂಟೆವರೆಗಿನ ಆರ್ ಆರ್ ನಗರ ಉಪ ಚುನಾವಣೆಯ ಮತದಾನದ ಪ್ರಮಾಣ ಶೇ.14.44 ರಷ್ಟಾಗಿದೆ. ಶಿರಾದಲ್ಲಿ ಶೇ. 23.63ರಷ್ಟು ಮತದಾನವಾಗಿದೆ.
ಆರ್ ಆರ್ ನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ - by election updates
ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಚುರುಕಿನಿಂದ ನಡೆಯುತ್ತಿದ್ದ ಮತದಾನ ಸದ್ಯ ಮಂದಗತಿಯಲ್ಲಿ ಸಾಗುತ್ತಿದೆ. ಅದರಲ್ಲೂ ಯುವ ಮತದಾರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಗೋಚರಿಸುತ್ತಿದೆ.
ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಚುರುಕಿನಿಂದ ನಡೆಯುತ್ತಿದ್ದ ಮತದಾನ ಸದ್ಯ ನೀರಸವಾಗಿದೆ. ಅದರಲ್ಲೂ ಯುವ ಮತದಾರರು ಮತಗಟ್ಟೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಈ ಮಧ್ಯೆ ಹಿರಿಯ ನಾಗರಿಕರು, ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವುದರೊಂದಿಗೆ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.
ವಿಕಲಚೇತನ ದಂಪತಿ ಮಂಜುನಾಥ್-ನಾಗಮ್ಮ ಲಗ್ಗೆರೆಯ ಬೆತೆಲ್ ಮೆಡಿಕಲ್ ಮಿಷನ್ನಲ್ಲಿ ಮತ ಚಲಾಯಿಸಿದರು. ಇನ್ನು ಹಲವೆಡೆ ಹೆಚ್ಚಿನವರು ವ್ಹೀಲ್ ಚೇರ್ನಲ್ಲಿ ಬಂದು ತಮ್ಮ ನೆಚ್ಚಿನ ಆಭ್ಯರ್ಥಿಗೆ ಮತ ಹಾಕಿದ್ದಾರೆ. ಮತದಾನದ ಜವಾಬ್ದಾರಿ ನಿಭಾಯಿಸಲು ಬಂದ ರಾಜಕೀಯ ಪಕ್ಷಗಳ ಏಜೆಂಟರುಗಳು ಸಾಮಾಜಿಕ ಅಂತರ ಮರೆತಿರುವುದು ಕಂಡು ಬರುತ್ತಿದೆ. ಆರ್ಆರ್ ನಗರದ ಬಿಇಟಿ ಶಾಲಾ ಮತಗಟ್ಟೆ ಬಳಿ ಕಾರ್ಯಕರ್ತರು ಮತದಾರರು ಗುಂಪು ಗುಂಪಾಗಿ ಸೇರಿ ಗುರುತಿನ ಚೀಟಿ ನೀಡುತ್ತಿರುವುದು ಕಂಡುಬಂದಿದೆ.