ಬೆಂಗಳೂರು:ಆರ್ಆರ್ ನಗರ ಉಪಚುನಾವಣೆ ಅಖಾಡ ರೆಡಿಯಾಗಿದ್ದು, ಸದ್ಯ ಆಯಾ ಪಕ್ಷದವರು ಪ್ರಚಾರದ ಭರಾಟೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಕಾನೂನು ರೀತಿಯಲ್ಲಿ ಯಾವುದೇ ತೊಡಕು ಉಂಟಾಗಬಾರದು ಎಂದು ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ತಂಡ ಹಾಗೂ ಗುಪ್ತಚರ ಇಲಾಖೆ ಕ್ಷೇತ್ರದ ಸುತ್ತ ಕಣ್ಗಾವಲು ಇಟ್ಟಿದೆ.
ಆರ್ ಆರ್ ನಗರ ಉಪಚುನಾವಣೆ: ಸೆಂಟ್ರಲ್ ಪ್ಯಾರಾಮಿಲಿಟರಿ, ಸಿಐಎಸ್ಎಫ್ ದೌಡು - RR Nagar by election latest News
ಆರ್ ಆರ್ ನಗರ ಉಪಚುನಾವಣೆ ಅಖಾಡ ರೆಡಿಯಾಗಿದ್ದು, ಕಾನೂನು ರೀತಿಯಲ್ಲಿ ಯಾವುದೇ ತೊಡಕು ಉಂಟಾಗಬಾರದು ಎಂದು ಗುಪ್ತಚಾರ ಇಲಾಖೆ ಕ್ಷೇತ್ರದ ಸುತ್ತ ಕಣ್ಗಾವಲು ಇಟ್ಟಿದೆ.
ಆರ್ಆರ್ ನಗರ ಉಪಚುನಾವಣೆ
ನವೆಂಬರ್ 3ರಂದು ಚುನಾವಣೆ ನಡೆಯುವ ಹಿನ್ನೆಲೆ ಸೆಂಟ್ರಲ್ ಪ್ಯಾರಾಮಿಲಿಟರಿ, ಸಿಐಎಫ್ ತಂಡ ತಮಿಳುನಾಡು, ಮೈಸೂರಿನಿಂದ ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಆರ್ ಆರ್ ನಗರ ಕ್ಷೇತ್ರದ ಜ್ಞಾನಭಾರತಿ, ಕಾಮಾಕ್ಷಿಪಾಳ್ಯ, ಅನ್ನಪೂರ್ಣೇಶ್ವರಿ ನಗರ, ಯಶವಂತಪುರ ಸುತ್ತ ಪಥ ಸಂಚಲನ ಮಾಡಲಿದೆ.
ಕ್ಷೇತ್ರದಲ್ಲಿ ಮತದಾರರಿಗೆ ಆಮಿಷ ಒಡ್ಡೋದು, ಮತ ಹಾಕುವಂತೆ ಒತ್ತಡ ಹಾಕೊದು, ಮತದಾರರನ್ನು ಸೆಳೆಯಲು ಪ್ರಯತ್ನ, ಅಹಿತಕರ ಘಟನೆ ನಡೆಯದ ರೀತಿ ಮುಂಜಾಗ್ರತಾ ಕ್ರಮವಾಗಿ ಸದ್ಯ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.