ಬೆಂಗಳೂರು: ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದರು.
ಆರ್ಸಿಬಿ ಹ್ಯಾಟ್ರಿಕ್ ಗೆಲುವು... ಮುಗಿಲುಮುಟ್ಟಿತು ಅಭಿಮಾನಿಗಳ ಸಂಭ್ರಮ - undefined
ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
![ಆರ್ಸಿಬಿ ಹ್ಯಾಟ್ರಿಕ್ ಗೆಲುವು... ಮುಗಿಲುಮುಟ್ಟಿತು ಅಭಿಮಾನಿಗಳ ಸಂಭ್ರಮ](https://etvbharatimages.akamaized.net/etvbharat/images/768-512-3099832-thumbnail-3x2-rcb.jpg)
ಆರ್ಸಿಬಿ ತಂಡಕ್ಕೆ ಹ್ಯಾಟ್ರಿಕ್ ಗೆಲುವು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮ
ಸತತವಾಗಿ ಆರು ಪಂದ್ಯಗಳನ್ನು ಸೋತ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲ ಜಯ ಸಾಧಿಸಿದ್ದ ಬೆಂಗಳೂರು ತಂಡ, ನಿನ್ನೆ ನಡೆದ ಪಂದ್ಯದಲ್ಲಿ ಮತ್ತೆ ಪಂಜಾಬ್ ತಂಡವನ್ನು ಮಣಿಸುವ ಮೂಲಕ 4 ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ.
ಇದರಿಂದ ಕಮರಿ ಹೋಗಿದ್ದ ಪ್ಲೇ ಆಫ್ ಕನಸಿಗೆ ಮತ್ತೆ ಜೀವ ಬಂದಂತಾಗಿದೆ. ಮುಂಬರುವ ಮೂರು ಪಂದ್ಯಗಳಲ್ಲಿ ಆರ್ಸಿಬಿ ತಂಡ ಉತ್ತಮ ರನ್ ರೇಟ್ನೊಂದಿಗೆ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸುವುದು ಪಕ್ಕಾ ಅಂತಾರೆ ಅಭಿಮಾನಿಗಳು.